ADVERTISEMENT

ಸಿದ್ಧಗಂಗಾ ಮಠದ ಬಳಿ ಹೊಂಡದಲ್ಲಿ ವಿದ್ಯಾರ್ಥಿ ಶವ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 20:18 IST
Last Updated 18 ಜುಲೈ 2021, 20:18 IST

ತುಮಕೂರು: ಸಿದ್ಧಗಂಗಾ ಮಠದ ಹಿಂಭಾ ಗದಲ್ಲಿ ಇರುವ ರಾಮದೇವರ ಬೆಟ್ಟದ ಮೇಲಿನ ಹೊಂಡದಲ್ಲಿ ವಿದ್ಯಾರ್ಥಿ ಶವ ಭಾನುವಾರ ಪತ್ತೆಯಾಗಿದೆ.

ಸಿದ್ಧಗಂಗಾ ಮಠದಲ್ಲಿರುವ ಶಾಲೆ ಯಲ್ಲಿ 10ನೇ ತರಗತಿ ಓದುತ್ತಿದ್ದ ಗಗನ್‌ ಗೌಡ (16) ಮೃತಪಟ್ಟಿರುವ ಬಾಲಕ. ನೆಲಮಂಗಲ ತಾಲ್ಲೂಕು ಹೆಸರುಘಟ್ಟ ಸಮೀಪದ ಕಾಕೋಳ ಗ್ರಾಮದ ಪ್ರಕಾಶ್ ಎಂಬುವರ ಪತ್ರನಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಠದಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ಜುಲೈ 16ರಿಂದ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಕ್ಯಾತ್ಸಂದ್ರ ಠಾಣೆಗೆ ತಂದೆ ಪ್ರಕಾಶ್ ಶನಿವಾರ ದೂರು ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.