ADVERTISEMENT

ತನಿಷ್ಕ 290ನೇ ಆಭರಣ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 14:19 IST
Last Updated 17 ಮೇ 2019, 14:19 IST
ತನಿಷ್ಕ ಆಭರಣ ಮಳಿಗೆ ಉದ್ಘಾಟನೆ ಬಳಿಕ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಆಭರಣ ವೀಕ್ಷಿಸಿದರು. ಮಳಿಗೆ ಮಾಲೀಕ ಪ್ರಕಾಶ್‌ಕುಮಾರ್ ರಾಥೋಡ್, ಟೈಟಾನ್ ಕಂಪನಿ ಜ್ಯುವೆಲರಿ ವಿಭಾಗದ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್ ಕುಲಹಳ್ಳಿ ಇದ್ದರು
ತನಿಷ್ಕ ಆಭರಣ ಮಳಿಗೆ ಉದ್ಘಾಟನೆ ಬಳಿಕ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಆಭರಣ ವೀಕ್ಷಿಸಿದರು. ಮಳಿಗೆ ಮಾಲೀಕ ಪ್ರಕಾಶ್‌ಕುಮಾರ್ ರಾಥೋಡ್, ಟೈಟಾನ್ ಕಂಪನಿ ಜ್ಯುವೆಲರಿ ವಿಭಾಗದ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್ ಕುಲಹಳ್ಳಿ ಇದ್ದರು   

ತುಮಕೂರು: ನಗರದ ಫೀಲ್ಡ್ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ರಸ್ತೆಯಲ್ಲಿ ಟಾಟಾ ಕಂಪನಿಯ ‘ತನಿಷ್ಕ’ದ 290ನೇ ಮಾರಾಟ ಮಳಿಗೆ ಶುಕ್ರವಾರ ಪ್ರಾರಂಭಗೊಂಡಿತು.

ನೂತನ ತನಿಷ್ಕ ಆಭರಣ ಮಳಿಗೆ ಉದ್ಘಾಟಿಸಿದ ಟೈಟಾನ್ ಕಂಪನಿಯ ಜ್ಯುವೆಲರಿ ವಿಭಾಗದ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಸಂದೀಪ್ ಕುಲಹಳ್ಳಿ ಮಾತನಾಡಿ, ‘ತನಿಷ್ಕ ಗ್ರಾಹಕರ ಅಪೇಕ್ಷೆಯಂತೆ ದೇಶವ್ಯಾಪಿ ಮಾರಾಟ ಮಳಿಗೆಗಳನ್ನು ಸ್ಥಾಪಿಸುತ್ತಿದೆ. ಈ ದಿನ ಇಲ್ಲಿ ಉದ್ಘಾಟನೆಗೊಂಡಿರುವ ತನಿಷ್ಕ ಆಭರಣ ಮಳಿಗೆಯು 290ನೆಯದ್ದಾಗಿದೆ’ ಎಂದು ಹೇಳಿದರು.

ಗುಣಮಟ್ಟ ಮತ್ತು ಸೇವೆಯಲ್ಲಿ ಕಂಪನಿಯು ಯಾವುದೇ ರಾಜಿ ಇಲ್ಲ. ಹೀಗಾಗಿಯೇ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, 26 ವರ್ಷಗಳಿಂದ ಅದೇ ವಿಶ್ವಾಸ, ಬಾಂಧವ್ಯ ಉಳಿಸಿಕೊಂಡು ಬಂದಿದೆ ಎಂದು ನುಡಿದರು.

ADVERTISEMENT

ಈ ನೂತನ ಮಳಿಗೆಯು 2600 ಚದರ ಅಡಿ ಇದೆ. ವಿಶಾಲವಾದ ಮಳಿಗೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಮ್ ನಲ್ಲಿ 2500ಕ್ಕೂ ಹೆಚ್ಚು ವಿನ್ಯಾಸದ ಆಭರಣಗಳು ಗ್ರಾಹಕರಿಗೆ ಲಭ್ಯ ಇವೆ. ವಿಶೇಷವಾಗಿ ಮದುವೆ ಆಭರಣ, ಗರಿಷ್ಠ ಬೆಲೆಯುಳ್ಳ ವಜ್ರದ ಆಭರಣಗಳು ವಿಶೇಷವಾಗಿ ಇಲ್ಲಿ ಲಭಿಸಲಿವೆ ಎಂದು ವಿವರಿಸಿದರು.

ಈ ನೂತನ ತನಿಷ್ಕ ಆಭರಣ ಮಳಿಗೆ ಪ್ರಾರಂಭೋತ್ಸವ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ತನಿಷ್ಕ ನೀಡುತ್ತಿದೆ. ಪ್ರತಿ ಆಭರಣ ಖರೀದಿ ಮೇಲೆ ಶೇ 20ರಷ್ಟು ರಿಯಾಯಿತಿ ಮತ್ತು ಉಚಿತ ಚಿನ್ನದ ನಾಣ್ಯ (ಗೋಲ್ಡ್ ಕಾಯಿನ್) ವಿತರಿಸಲಾಗುತ್ತಿದೆ. ಈ ವಿಶೇಷ ಕೊಡುಗೆ ಮೇ 19ರವರೆಗೆ ಮಾತ್ರ ಇರಲಿದೆ ಎಂದು ಮಾಹಿತಿ ನೀಡಿದರು.

ಶಾಸಕ, ಸಚಿವರ ಭೇಟಿ: ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಗಣ್ಯರು ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತನಿಷ್ಕ ಆಭರಣ ಮಳಿಗೆ ಮಾಲೀಕರಾದ ಪ್ರಕಾಶ್‌ಕುಮಾರ್ ರಾಥೋಡ್, ಶ್ರೀಕಾಂತ್ ರಾಥೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.