ADVERTISEMENT

ಮಧುಗಿರಿ: ರಸ್ತೆ ಗುಂಡಿಗೆ ಬಿದ್ದು ಜೀವ ಕಳೆದುಕೊಂಡ ನಿವೃತ್ತ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 9:45 IST
Last Updated 29 ಆಗಸ್ಟ್ 2022, 9:45 IST
ನಿವೃತ್ತ ಶಿಕ್ಷಕ ಗಂಗಾಧರಪ್ಪ
ನಿವೃತ್ತ ಶಿಕ್ಷಕ ಗಂಗಾಧರಪ್ಪ    

ಮಧುಗಿರಿ: ಪಟ್ಟಣದ ಪಾವಗಡ ರಸ್ತೆಯ ಲಿಂಗೇನಹಳ್ಳಿ ರಸ್ತೆಯಲ್ಲಿ ಗುಂಡಿಗೆ ಬಿದ್ದು ನಿವೃತ್ತ ಶಿಕ್ಷಕ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪಟ್ಟಣದ ಲೋಕೋಪಯೋಗಿ ವಸತಿ ನಿಲಯದ ನಿವಾಸಿ ನಿವೃತ್ತ ಶಿಕ್ಷಕ ಗಂಗಾಧರಪ್ಪ (63) ಗುಂಡಿಯಲ್ಲಿ ಬಿದ್ದು ಮೃತಪಟ್ಟವರು. ಭಾನುವಾರ ರಾತ್ರಿ ಪಟ್ಟಣದ ಲಿಂಗೇನಹಳ್ಳಿಗೆ ಹೋಗಿ ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಗುಂಡಿಗೆ ದ್ವಿಚಕ್ರವಾಹನ ಆಯತಪ್ಪಿ ಬಿದ್ದು ಸುಮಾರು 10 ಅಡಿ ಮುಂದಕ್ಕೆ ಚಿಮ್ಮಿದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಣ್ಣ ಕೊಂಬೆಗಳನ್ನು ಕಿತ್ತು ಗುಂಡಿಗೆ ಅಡ್ಡಲಾಗಿ ಇಟ್ಟಿದ್ದರು. ಮಳೆಯಿಂದ ಗಿಡಗಂಟೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಮಳೆಯ ನೀರು ಗುಂಡಿಯಲ್ಲಿ ನಿಂತಿದೆ. ರಸ್ತೆಯೆಂದು ಹೋದ ಪರಿಣಾಮ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

ADVERTISEMENT

ಪಟ್ಟಣದ ರಸ್ತೆಗಳೆಲ್ಲ ಗುಂಡಿ ಬಿದ್ದು, ಜನರ ಜೀವನಕ್ಕೆ ಕಂಟಕವಾಗಿ ಪರಿಣಮಿಸಿವೆ. ಕಳೆದ ಒಂದು ವರ್ಷದಿಂದ ರಸ್ತೆಗಳು ಗುಂಡಿ ಬಿದ್ದಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ವ್ಯಕ್ತಿಯೊಬ್ಬರು ಗುಂಡಿಗೆ ಬಿದ್ದು ಜೀವ ಕಳೆದುಕೊಂಡ ಮೇಲೆ ಎಚ್ಚೆತ್ತುಕೊಂಡು ಗುಂಡಿಗೆ ತಾತ್ಕಾಲಿಕ ತೇಪೆ ಹಾಕಿ ಕೈ ತೊಳೆದುಕೊಂಡಿದ್ದಾರೆ. ಪುರಸಭೆ ಮೊದಲೇ ಗುಂಡಿಯನ್ನು ಮುಚ್ಚಿದ್ದರೆ ಈ ಸಾವು ಸಂಭವಿಸುತ್ತಿರಲ್ಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.