ADVERTISEMENT

ಶಿಕ್ಷಕ ವರ್ಗ: ಮಕ್ಕಳ ಬೇಸರ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 14:26 IST
Last Updated 12 ಸೆಪ್ಟೆಂಬರ್ 2019, 14:26 IST
ಫೋಟೋ 12ಟಿಪಿಆರ್ 06 ಶಿಕ್ಷಕ ವಸಂತಕುಮಾರ್
ಫೋಟೋ 12ಟಿಪಿಆರ್ 06 ಶಿಕ್ಷಕ ವಸಂತಕುಮಾರ್   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಸರ್ಕಾರಿ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕ ವಸಂತಕುಮಾರ್ ವರ್ಗಾವಣೆ ವಿಷಯ ಕೇಳಿ ಮಕ್ಕಳು ಬಹಿರಂಗವಾಗಿ ನೋವು ತೋಡಿಕೊಂಡರು.

ನಿಷ್ಠೆಯಿಂದ, ಪ್ರೀತಿಯಿಂದ ಪಾಠ ಹೇಳುತ್ತಿದ್ದ ಇವರು ಮಕ್ಕಳಿಗೆ ಇಷ್ಠದ ಶಿಕ್ಷಕರಾಗಿದ್ದರು. 13 ವರ್ಷದಿಂದ ಇದೇ ಶಾಲೆಯಲ್ಲಿ ಪಾಠ ಹೇಳುತ್ತಿದ್ದ ಇವರು ಪೋಷಕರ ಅಭಿಮಾನಕ್ಕೂ ಪಾತ್ರರಾಗಿದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದ ಇವರು ಓದಿನಲ್ಲಿ ಚುರುಕಾದ ಮಕ್ಕಳನ್ನು ಗುರುತಿಸಿ ಬಹುಮಾನದ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಎಲ್ಲ ಮಕ್ಕಳಲ್ಲಿ ಸಮನಾಗಿ ಶಿಕ್ಷಣ ಗುಣಮಟ್ಟ ತರಲು ವಿಶೇಷ ಕಾಳಜಿ ವಹಿಸಿದ್ದರು. ಇವರು ವರ್ಗಾಗೊಂಡ ವಿಷಯ ತಿಳಿದ ಕೂಡಲೇ ಮಕ್ಕಳ ಕಣ್ಣು ತೇವ ಮಾಡಿಕೊಂಡರು. ಸದ್ಯ ಇವರು ಪಕ್ಕದ ಚೌಡೇನಹಳ್ಳಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.