ADVERTISEMENT

12ರಂದು ಕಾಟಮಲಿಂಗೇಶ್ವರ ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:11 IST
Last Updated 9 ಆಗಸ್ಟ್ 2024, 16:11 IST

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಕ್ಯಾತೆದೇವರಹಟ್ಟಿ ಗ್ರಾಮದಲ್ಲಿ ಆಗಸ್ಟ್‌ 10ರಿಂದ 12ರ ವರೆಗೆ ಕ್ಯಾತೆ ದೇವರ ಮತ್ತು ಕಾಟಮಲಿಂಗೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

10ರಂದು ಕರೆಕಲ್ಲು ಚಿತ್ರಲಿಂಗೇಶ್ವರ ಸ್ವಾಮಿ, ಮುದ್ದೇನಹಳ್ಳಿ ಓಣಿಹಟ್ಟಿ ಈರಣ್ಣ ಸ್ವಾಮಿ, ಯತ್ತಪ್ಪನಹಟ್ಟಿಯ ಎತ್ತಪ್ಪ ಸ್ವಾಮಿ, ಜಾನಕಲ್ಲು ಕರಿಯಮ್ಮ ದೇವರುಗಳು ಬರಲಿವೆ. 12ರಂದು ಬೆಳಿಗ್ಗೆ 9ರಿಂದ 10ಗಂಟೆಗೆ ದೇವಾಲಯದ ಕಳಶ ಪ್ರತಿಷ್ಠಾಪನೆ ಹಾಗೂ ದೇವಾಲಯದ ಉದ್ಘಾಟನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT