ADVERTISEMENT

ಕೌಶಲ ಉಳ್ಳವರಿಗೆ ಅವಕಾಶ ತೆರೆದ ಬಾಗಿಲು

‘ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ’ ಅಂತರರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:10 IST
Last Updated 26 ಜುಲೈ 2025, 4:10 IST
ತಿಪಟೂರು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ ಕುರಿತು ಸಮ್ಮೇಳನ ನಡೆಯಿತು
ತಿಪಟೂರು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ ಕುರಿತು ಸಮ್ಮೇಳನ ನಡೆಯಿತು   

ತಿಪಟೂರು: ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್ ಕ್ಷೇತ್ರಗಳಲ್ಲಿ ಯುವ ಇಂಜಿನಿಯರುಗಳಿಗೆ ಪ್ರಪಂಚದಾದ್ಯಂತ ಅವಕಾಶದ ಬಾಗಿಲು ತೆರೆಯುತ್ತಿದೆ ಎಂದು ಫಿಲಿಪಿನ್ಸ್‌ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಲೀನ್‌ಕಾರ್ಲೋ ಸ್ಯಾಂಟೋಸ್ ಟೊಲೆಂಟಿನೊ ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ದತ್ತಾಂಶ ವಿಜ್ಞಾನ ಮತ್ತು ಅಂತರ್ಜಾಲ ಭದ್ರತೆ’ ಕುರಿತು ನಡೆದ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಅಮೆರಿಕ, ಇಂಗ್ಲೆಂಡ್‌, ಚೀನಾ, ಹಾಂಕಾಂಗ್‌ ಮೊದಲಾದ ದೇಶಗಳಲ್ಲಿ ಕೌಶಲಯುತ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇಂತಹ ಸಮ್ಮೇಳನದಲ್ಲಿ ನೂತನ ಅನ್ವೇಷಣೆಗಳನ್ನು ಪ್ರಸ್ತುತಪಡಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಬೆಂಗಳೂರಿನ ಇಂಟೆಲ್ ಕಾರ್ಪೋರೇಶನ್ ಮ್ಯಾನೇಜರ್ ಪ್ರವೀಣ್‌ಕುಮಾರ್ ಮಾತನಾಡಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡೇಟಾ ಸೈನ್ಸ್ ಹಾಗೂ ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಸಾಕಷ್ಟು ಹೊಸ ಅವಕಾಶಗಳು ಪ್ರಾರಂಭವಾಗುತ್ತಿದೆ. ನೂತನ ಎಂಜಿನಿಯರ್‌ಗಳು ಈ ಕ್ಷೇತ್ರದಲ್ಲಿ ಅನ್ವೇಷಣೆ ಮಾಡಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಸಂಸ್ಥೆ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ, ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಗಾರಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಸಂಸ್ಥೆ ಮತ್ತು ಪೋಷಕರ ಶ್ರಮವನ್ನು ಸಕಾಲದಲ್ಲಿ ಅರ್ಥೈಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಐಇಇಇ ಬೆಂಗಳೂರು ವಿಭಾಗದ ಮುಖ್ಯಸ್ಥ ಪರಮೇಶಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಐಇಇಇ ವಿಷಯ ಸಂಬಂಧ ಮತ್ತು ತಾಂತ್ರಿಕತೆ ಸಾರ್ಥಕತೆ ಬಗ್ಗೆ ಹತ್ತು ಹಲವು ವಾಸ್ತವಾಂಶ, ಜೊತೆಗೆ ಹಿಂದಿನ ಮತ್ತು ಮುಂದಿನ ಸ್ಥಿತಿಗತಿಗಳ ಅಧ್ಯಯನದ ಬಗ್ಗೆ ತೀವ್ರ ನಿಗಾ ವಹಿಸುವ ಮೂಲಕ ಎಚ್ಚರಿಕೆಯಿಂದ ಮುಂದೆ ಸಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ, ತಾಂತ್ರಿಕ ವಿಶ್ವವಿದ್ಯಾಲಯಗಳ ಮೂಲಕ ಗಣನೀಯವಾಗಿ ಉನ್ನತ ಮಟ್ಟದಲ್ಲಿ ವೈಜ್ಞಾನಿಕ ಲೇಖನ ಮತ್ತು ಉಪನ್ಯಾಸ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಕಾರ್ಯಗಾರ ಮತ್ತು ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಂಡು ವಿವಿಧ ವಿಭಾಗಗಳಲ್ಲಿ ಖ್ಯಾತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷ ಜಿ.ಪಿ.ದೀಪಕ್, ಕಾರ್ಯದರ್ಶಿ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಎಚ್.ಜಿ.ಸುಧಾಕರ್, ಟಿ.ಯು.ಜಗದೀಶ್‌ಮೂರ್ತಿ, ಪ್ರಾಂಶುಪಾಲ ಜಿ.ಡಿ.ಗುರುಮೂರ್ತಿ, ಎಐ ವಿಭಾಗದ ಮುಖ್ಯಸ್ಥ ಡಾ.ಎಂ.ಎಲ್. ರವಿಪ್ರಕಾಶ್, ಸಿಎಸ್‌ಇ ಮುಖ್ಯಸ್ಥೆ ಸಿ.ಮೈತ್ರಿ, ಎಂಬಿಎ ಮುಖ್ಯಸ್ಥೆ ದೀಪ್ತಿ ಅಮಿತ್, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ‍ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.