ADVERTISEMENT

ವಿದ್ಯಾರ್ಥಿ ಆತಂಕ ದೂರ ಮಾಡಿದ ತಜ್ಞರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 5:16 IST
Last Updated 7 ಮಾರ್ಚ್ 2024, 5:16 IST
ಪ್ರೇರಣಾ ಶಿಬಿರದಲ್ಲಿ ಶಿಕ್ಷಕ ಎ.ಉಮಾಮಾಹೇಶ್‌ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು
ಪ್ರೇರಣಾ ಶಿಬಿರದಲ್ಲಿ ಶಿಕ್ಷಕ ಎ.ಉಮಾಮಾಹೇಶ್‌ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು   

ತುಮಕೂರು: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರದಲ್ಲಿ ಪರೀಕ್ಷೆಯಲ್ಲಿ ಅತ್ಯಂತ ಕಠಿಣ ಎನಿಸುವ ಗಣಿತ, ವಿಜ್ಞಾನ ವಿಷಯಗಳ ಕುರಿತು ತಜ್ಞರು ವಿದ್ಯಾರ್ಥಿಗಳ ಆತಂಕ ದೂರ ಮಾಡಿದರು.

ವಿಜ್ಞಾನ ವಿಷಯದ ಬಗ್ಗೆ ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಟಿ.ಜಿ.ಜಗದೀಶ್‌ ಕುಮಾರ್‌, ಗಣಿತ ವಿಷಯದ ಬಗ್ಗೆ ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ.ಉಮಾಮಾಹೇಶ್‌ ತಿಳಿಸಿಕೊಟ್ಟರು.

ವಿಜ್ಞಾನ ವಿಚಾರ– ಸಲಹೆ

ADVERTISEMENT

* ಚಿತ್ರಗಳ ಮಾದರಿ, ಭಾಗಗಳು, ಕಾರ್ಯ, ಆಕಾರದ ಬಗ್ಗೆ ಓದಿಕೊಳ್ಳಬೇಕು

* ಮುಖ್ಯವಾದ ವ್ಯಾಖ್ಯಾನ, ಅನುಕೂಲ– ಅನಾನುಕೂಲ, ವ್ಯತ್ಯಾಸ, ಮಾದರಿಗಳ ಅಧ್ಯಯನ ಮಾಡಬೇಕು

* ರೇಖಾಚಿತ್ರ, ಅವುಗಳ ಮಾದರಿ, ವಿನ್ಯಾಸ, ಸಂರಚನೆಯ ಸಿದ್ಧಾಂತ, ಪ್ರಯೋಗದ ವಿಧಾನಗಳ ಕಲಿಕೆಗೆ ಒತ್ತು ನೀಡಬೇಕು

ಗಣಿತ ವಿಚಾರ– ಸಲಹೆ

* ಪ್ರಮೇಯಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು

* ಲೆಕ್ಕ ಬಿಡಿಸುವ ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು

* ಶೇ 50ರಷ್ಟು ಪ್ರಶ್ನೆಗಳಿಗೆ ಪ್ರಮೇಯ ಹಾಗೂ ಸೂತ್ರಗಳನ್ನು ಕಡ್ಡಾಯವಾಗಿ ಬರೆಯಬೇಕು

* ಅರ್ಧ ಉತ್ತರ ಬರೆದರೂ ಅದಕ್ಕೆ ಕನಿಷ್ಠ ಅಂಕ ನೀಡುತ್ತಾರೆ, ಅದರ ಅರಿವಿರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.