ಪಾವಗಡ: ತಾಲ್ಲೂಕಿನ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಾರಹಳ್ಳಿ ತಾಂಡಾದ ಕಾಳಿಕಾ ದೇವಿ ದೇಗುಲದ ಬೀಗ ಮುರಿದು ಬುಧವಾರ ರಾತ್ರಿ ₹2.80ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಹುಂಡಿಯಲ್ಲಿದ್ದ ನಗದು ಕಳವು ಮಾಡಲಾಗಿದೆ.
ಮೂಲ ವಿಗ್ರಹಕ್ಕೆ ತೊಡಿಸಲಾಗಿದ್ದ ಚಿನ್ನದ ಮೂಗುತಿ, ತಾಳಿ ಬೊಟ್ಟು, ಬೆಳ್ಳಿ ಕಿರೀಟ, ಹಸ್ತ, ಬೆಳ್ಳಿ ಬೊಟ್ಟು, ಇತ್ಯಾದಿ ಆಭರಣಗಳನ್ನು ಕಳವು ಮಾಡಲಾಗಿದೆ. ಹುಂಡಿ ಒಡೆದು ನಗದು ದೋಚಲಾಗಿದೆ.
ಗುರುವಾರ ಶ್ವಾನದಳದೊಂದಿಗೆ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.