ಪಾವಗಡ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದೂರವಾಗಿದ್ದ ಮೂರು ಜೋಡಿಗಳು ಮತ್ತೆ ಒಂದಾದರು. 847 ಪ್ರಕರಣ ಇತ್ಯರ್ಥವಾದವು. ₹1.57 ಕೋಟಿ ಮೊತ್ತ ಇತ್ಯರ್ಥವಾಯಿತು.
ಪಟ್ಟಣದ ನ್ಯಾಯಾಲಯ ಆವರಣ, ಮೂರು ನ್ಯಾಯಾಲಯಗಳು ಜನರಿಂದ ತುಂಬಿತ್ತು. ಬೆಳಿಗ್ಗೆಯಿಂದಲೇ ಲೋಕ ಅದಾಲತ್‌ಗೆ ಜನತೆ ಕಾದು ಕುಳಿತಿದ್ದರು.
ನ್ಯಾಯಾಧೀಶ ವಿ. ಮಾದೇಶ 33 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.
ವರ್ಷಗಳ ಕಾಲ ದೂರವಾಗಿ ವಿಚ್ಛೇದನಕ್ಕೆ ದಾವೆ ಹೂಡಿದ್ದ ಮೂರು ಜೋಡಿಗಳನ್ನು ಬುದ್ದಿವಾದ ಹೇಳಿ ಅದಾಲತ್‌ನಲ್ಲಿ ಮತ್ತೆ ಒಂದಾಗುವಂತೆ ಮಾಡಿದರು. ನ್ಯಾಯಾಲಯದಲ್ಲಿಯೇ ದಂಪತಿಗಳಿಗೆ ಹಾರ ಹಾಕಿಸಿ, ಸಿಹಿ ಹಂಚಿ ವಕೀಲರು, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.
₹75.97 ಲಕ್ಷ ಮೊತ್ತದ ಸಾಲ, ಕರಾರು ಸೇರಿದಂತೆ ವಿವಿಧ ಪ್ರಕರಣಗಳು ಇತ್ಯರ್ಥವಾದವು.
ನ್ಯಾಯಾಧೀಶ ಸುದೇರ್ 435 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ₹39.43 ಲಕ್ಷ ಮೊತ್ತದ ಪ್ರಕರಣಗಳು ಇತ್ಯರ್ಥವಾದವು.
ನ್ಯಾಯಾಧೀಶೆ ಪ್ರಿಯಾಂಕ, 381 ಪ್ರಕರಣಗಳನ್ನು ಬಗೆಹರಿಸಿದರು. ₹42.06 ಲಕ್ಷ ಮೌಲ್ಯದ ದಾವೆಗಳನ್ನು ಇತ್ಯರ್ಥಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.