ತಿಪಟೂರು: ನಗರಸಭೆಯ ಅಧ್ಯಕ್ಷೆ ಯಮುನಾ.ಎ.ಎಸ್ ಅವರು ಸೆ.24ರಂದು ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ತೆರವಾದ ತಿಪಟೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ತಿಪಟೂರು ಉಪ ವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.
ಅ.31ಕ್ಕೆ ನಗರಸಭೆ ಆಡಳಿತಾವಧಿ ಮುಗಿಯಲಿದೆ. ಕೇವಲ 25 ದಿನಗಳಿಗೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತದೆಯೂ ಇಲ್ಲವೂ ಎಂಬುದು ಕೌತುಕದ ಪ್ರಶ್ನೆಯಾಗಿದೆ. ಈಗಾಗಲೇ 31 ಸದಸ್ಯರಲ್ಲಿ ಬಿಜೆಪಿಯ ಇಬ್ಬರು, ಜೆಡಿಎಸ್‌ನ ಇಬ್ಬರು ಸದಸ್ಯರು ಅನರ್ಹಗೊಂಡಿರುವುದು ಅಧ್ಯಕ್ಷ ಸ್ಥಾನದ ಚುನಾವಣೆ ಕುತೂಹಲಕರ ಸಂಗತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.