ತಿಪಟೂರು: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಏಕಾಗ್ರತೆ ಮೌಲ್ಯಗಳನ್ನು ಬೆಳೆಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ನಗರ ಪೊಲೀಸ್ ಠಾಣಾಧಿಕಾರಿ ವೆಂಕಟೇಶ್ ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧೀಕ್ಷಾ ಹೆರಿಟೇಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಪೊಲೀಸ್ ವ್ಯವಸ್ಥೆಯ ಪಾತ್ರ ಹಾಗೂ ಕಾರ್ಯಾಚರಣೆ, ಪೋಕ್ಸೊ ಕಾಯ್ದೆ, 18 ವರ್ಷದೊಳಗಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ಚಲಾಯಿಸಿದರೆ ಆಗುವ ತೊಂದರೆ, ಸೈಬರ್ ಕ್ರೈಂ, ವಿದ್ಯಾರ್ಥಿನಿಯರ ಸಂರಕ್ಷಣೆ ಹಾಗೂ ಸರ್ಕಾರಿ ಕಾನೂನು ಬಗ್ಗೆ ತಿಳಿಸಿದರು.
ಶಿಕ್ಷಕರಾದ ಮಂಜುನಾಥ್ ಬಿ.ಕೆ., ಶಿಕ್ಷಕ ಲೋಕೇಶ ಕೆ.ಎಸ್., ರಮ್ಯಾ, ಠಾಣೆ ಸಿಬ್ಬಂದಿ ಲೋಕೇಶ್, ಮೋಹನ್‌ಕುಮಾರ್, ಶೋಭಾ, ಪಲ್ಲವಿ, ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.