ಅರಳಗುಪ್ಪೆಶಾಲೆ
ತಿಪಟೂರು: ಮೂಡಲಪಾಯ ಯಕ್ಷಗಾನದ ತವರೂರು ಹಾಗೂ ಶಿಲ್ಪಕಲೆಯ ಬೀಡು ತಾಲ್ಲೂಕಿನ ಕಿಬ್ಬನಹಳ್ಳಿ ಅರಳಗುಪ್ಪೆ ಗ್ರಾಮದಲ್ಲಿ 1896ರಲ್ಲಿ ಪ್ರಾರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನ ಕಂಡಿದೆ. ಇಂದು ಪೋಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರ ಹಾಗೂ ಸಹಾಯದಿಂದ ಮುಂದುವರೆಯುತ್ತಿದೆ.
2024-25ನೇ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ಮೊದಲ ವರ್ಷದಲ್ಲಿ 18 ವಿದ್ಯಾರ್ಥಿಗಳ ದಾಖಾಲಾತಿಯನ್ನು ಕಂಡು ಪ್ರಸಕ್ತ ವರ್ಷದಲ್ಲಿ ಹಿರಿಯ ಹಾಗೂ ಹಳೆ ವಿದ್ಯಾರ್ಥಿಗಳ ಜೊತೆಗೂಡಿ ಹಿರಿಯ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ತೆರೆದು ಮಕ್ಕಳಿಗೆ ಶಾಲೆಗೆ ತೆರಳಲು ವಾಹನ ವ್ಯವಸ್ಥೆ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ಎಲ್‌ಕೆಜಿ, ಯುಕೆಜಿಗೆ 42 ವಿದ್ಯಾರ್ಥಿಗಳು ದಾಖಾಲಾಗಿದ್ದಾರೆ.
ಅರಳಗುಪ್ಪೆ ಶಾಲೆಯು ದ್ವಿಭಾಷೆಯಲ್ಲಿ ತರಗತಿಗಳಲ್ಲಿ ಬೋಧನೆ ಮಾಡಲಾಗುತ್ತಿದೆ. ಒಂದರಿಂದ ಏಳನೇ ತರಗತಿಗೆ 146, ಎಲ್‌ಕೆಜಿ, ಯುಕೆಜಿ 42 ಒಟ್ಟು 188 ವಿದ್ಯಾರ್ಥಿಗಳು ದಾಖಾಲಾಗಿದ್ದು ಸರ್ಕಾರದಿಂದ ಮೂವರು ಶಿಕ್ಷಕರು, ಇಬ್ಬರು ತಾತ್ಕಾಲಿಕ ಶಿಕ್ಷಕರು ಬೋಧನೆ ಮಾಡಲಾಗುತ್ತಿದೆ. ಕಾಯಂ ಶಿಕ್ಷಕರ ಅವಶ್ಯಕತೆಯಿದೆ. ಹಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳ ಸೇವಾ ಟ್ರಸ್ಟ್‌ವತಿಯಿಂದ ಮೂವರು ಶಿಕ್ಷಕರನ್ನು ಹಾಗೂ ಒಬ್ಬರನ್ನು ಮಕ್ಕಳ ಪಾಲನೆಗಾಗಿ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ. ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ಸಮಯ ಕೊಟ್ಟು ಮಕ್ಕಳಿಗೆ ತರಗತಿಗಳ ಬೋಧನೆ ಮಾಡಲಾಗುತ್ತಿದೆ.
ಶಾಲಾ ಮಕ್ಕಳಿಗೆ ಬಿಸಿಯೂಟದಂತೆ ಎಲ್‌ಕೆಜಿ, ಯುಕೆಜಿಗೆ ಮಕ್ಕಳಿಗೆ ದಾನಿಗಳ ನೆರವಿನಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಮಕ್ಕಳನ್ನು ಶಾಲೆಗೆ ಬರಲು ಎರಡು ವಾಹನ ವ್ಯವಸ್ಥೆನು ಮಾಡಿದ್ದು ದಿನಕ್ಕೆ 200 ಕೀ.ಮೀ ದೂರದ ಪ್ರಯಾಣ ಕೈಗೊಂಡಿದ್ದಾರೆ.
ಶಾಲೆಗೆ ಉತ್ತಮ ಆಟದ ಮೈದಾನ ಶೌಚಾಲಯ 200 ಮಕ್ಕಳಿಗೆ ಅವಶ್ಯಕತೆಗೆ ಅನುಗುಣವಾಗಿ ಅಡುಗೆ ಕೋಣೆ ಕಾಂಪೌಂಡ್ ತುರ್ತಾಗಿ ನಿರ್ಮಿಸಿದರೆ ಮಕ್ಕಳ ದಾಖಾಲಾತಿ ಹೆಚ್ಚುತ್ತದೆಎ.ಟಿ.ಪ್ರಸಾದ್ ಹಿರಿಯ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ಅಧ್ಯಕ್ಷ
ಸರ್ಕಾರಿ ಶಾಲೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಶೈಕ್ಷಣಿಕತೆಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆರಾಜಶೇಖರ್ ಅರಳಗುಪ್ಪೆಶಾಲೆ ಎಸ್‌ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.