ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದಲ್ಲಿ ಶುಕ್ರವಾರ ತಿರಂಗಾ ಯಾತ್ರೆ ನಡೆಯಿತು.
ತಿರಂಗಾ ಯಾತ್ರಾ ಸಮಿತಿಯಿಂದ ಹಮ್ಮಿಕೊಂಡಿದ್ದ ಯಾತ್ರೆಗೆ ಟೌನ್‌ಹಾಲ್ ವೃತ್ತದ ಬಳಿ ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಟೌನ್‌ಹಾಲ್, ಎಂ.ಜಿ.ರಸ್ತೆ, ಗುಂಚಿ ಚೌಕ ವೃತ್ತದ ಮುಖಾಂತರ ಸಾಗಿದ ಯಾತ್ರೆಯು ಸ್ವಾತಂತ್ರ್ಯ ಚೌಕದ ಬಳಿ ಕೊನೆಗೊಂಡಿತು.
ವಿವಿಧ ಸಂಘ, ಸಂಸ್ಥೆ ಮುಖಂಡರು, ನಿವೃತ್ತ ಸೈನಿಕರು, ಎನ್‍ಸಿಸಿ, ಸ್ಕೌಟ್ಸ್-ಗೈಡ್ಸ್ ಕೆಡೆಟ್‍ಗಳು, ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಪ್ರಮುಖರು, ಸಾರ್ವಜನಿಕರು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಜನಪದ ಕಲಾತಂಡಗಳ ಯಾತ್ರೆಗೆ ಮೆರುಗು ನೀಡಿದವು.
ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್, ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಮಹಾಲಕ್ಷ್ಮಿ ಪೀಠದ ಜ್ಞಾನಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಯಾತ್ರಾ ಸಮಿತಿ ಸಂಚಾಲಕ ಜಿ.ಆರ್.ಸುರೇಶ್, ಮುಖಂಡರಾದ ಎಂ.ಅಂಬಿಕಾ, ಎಸ್.ಶಿವಪ್ರಸಾದ್, ನವಚೇತನ್, ಕೆ.ಧನುಷ್, ಕೆ.ಜೆ.ರುದ್ರಪ್ಪ, ಆರ್.ಎ.ಸುರೇಶ್‍ಕುಮಾರ್, ಡಾ.ಕೆ.ಪಿ.ಸುರೇಶ್‍ಬಾಬು, ಪಿ.ಎನ್.ರಾಮಯ್ಯ, ಸಂದೀಪ್‍ಗೌಡ, ಟಿ.ಎಚ್.ಹನುಮಂತರಾಜು, ಎಚ್.ಎಂ.ರವೀಶಯ್ಯ, ಬಾವಿಕಟ್ಟೆ ನಾಗಣ್ಣ, ಸತ್ಯಮಂಗಲ ಜಗದೀಶ್, ರುದ್ರೇಶ್, ಗಣೇಶ್‍ಪ್ರಸಾದ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.