ADVERTISEMENT

ಇಂದು ಇಂಗ್ಲಿಷ್‌ ಕಲಿಕೆ ಅನಿವಾರ್ಯ: ಕೆ.ಆರ್.ರಾಜಕುಮಾರ್‌

ಎಂಪ್ರೆಸ್‌ ಕಾಲೇಜಿನಲ್ಲಿ ನಡೆದ ’ಇಂಗ್ಲಿಷ್‌ ತರಗತಿಗಳ ವಿಶೇಷ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 15:32 IST
Last Updated 23 ಅಕ್ಟೋಬರ್ 2018, 15:32 IST
ಕಾರ್ಯಕ್ರಮವನ್ನು ಕೆ.ಆರ್.ರಾಜಕುಮಾರ್‌ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಕೆ.ಆರ್.ರಾಜಕುಮಾರ್‌ ಉದ್ಘಾಟಿಸಿದರು   

ತುಮಕೂರು: ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇಂಗ್ಲಿಷ್‌ ಕಲಿಕೆ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದ್ದು, ಮುಕ್ತವಾಗಿ ಮಾತನಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪರಿಶಿಷ್ಟ ಪಂಗಡದ ಅಧಿಕಾರಿ ಕೆ.ಆರ್.ರಾಜಕುಮಾರ್‌ ತಿಳಿಸಿದರು.

ನಗರದ ಎಂಪ್ರೆಸ್‌ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಾಸಕಿರಣ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ’ಇಂಗ್ಲಿಷ್‌ ತರಗತಿಗಳ ವಿಶೇಷ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ಅಭ್ಯಾಸದಿಂದ ಮಾತ್ರವೇ ವಿದ್ಯಾರ್ಥಿಗಳು ಗುಣಾತ್ಮಕ ಗುರಿಯನ್ನು ಸಾಧಿಸಲಾರರು. ಇದಕ್ಕೆ ವಿಶೇಷ ಉಪನ್ಯಾಸ ತರಗತಿಗಳು ಉಪಯೋಗಕಾರಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಯಾರನ್ನೂ ದೂಷಿಸದೆ ನಿಮ್ಮ ನಾಯಕತ್ವ ನೀವೇ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಸ್‌.ನಾಗರತ್ನ ಮಾತನಾಡಿ, ’ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿಕೆ ಕಷ್ಟ ಎನ್ನುವ ಭಾವನೆಯನ್ನು ಬಿಡಬೇಕು. ಮನಸ್ಸು ಮಾಡಿದರೆ ಆಸಕ್ತಿ ವಹಿಸಿದರೆ ಎಲ್ಲವೂ ಸುಲಭವಾಗುತ್ತದೆ. ಇದರಿಂದ ಕಲಿಕೆಯಲ್ಲಿ ಯಶಸ್ಸು ಸಾಧಿಸಬಹುದು. ಆಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಯಶಸ್ಸು ಆಗಲು ಸಾಧ್ಯ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಜಿ.ಎಚ್.ಮಹದೇವಪ್ಪ, ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ, ಉಪನ್ಯಾಸಕರಾದ ರಾಜಣ್ಣ, ವಿ.ಟಿ.ಕೃಷ್ಣಮೂರ್ತಿ, ಜಯಶೀಲ, ಪವನ್‌ ಗಂಗಾಧರ್‌, ರಾಜಶೇಖರ್‌ ಹಾಗೂ ರಘು ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.