ಶಿರಾ: ನಗರದಲ್ಲಿ ಗುರುವಾರ ಗಾಳಿ ಮತ್ತು ಮಳೆಗೆ ಮರ ರಸ್ತೆಗೆ ಉರುಳಿ ಬಿದ್ದ ಕಾರಣ ಸಂಚಾರಕ್ಕೆ ಅಡಚಣೆಯಾಯಿತು
ಹಳೆ ರಾಷ್ಟ್ರೀಯ ಹೆದ್ದಾರಿ-4ರ ಎಪಿಎಂಸಿ ಸಮೀಪ ಮರ ಉರುಳಿ ಬಿದ್ದರೆ, ನಗರಸಭೆ ಕಡೆಯಿಂದ ಬರುವ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಬಿರುಗಾಳಿಗೆ ಮರದ ರಂಬೆಗಳು ರಸ್ತೆಗೆ ಮುರಿದು ಬಿದ್ದಿವೆ.
ಎಪಿಎಂಸಿ ಸಮೀಪ ಶಿರಾ ಕಡೆ ಬರುತ್ತಿದ್ದ ಟೆಂಪೊ ಮೇಲೆ ಮರ ಉರುಳಿ ಬಿದ್ದಿವೆ ಜೊತೆಗೆ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿದೆ.
ರಸ್ತೆಗೆ ಮರದ ರಂಬೆಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋದ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರಿಂದಾಗಿ ರಸ್ತೆಯ ಒಂದೇ ಬದಿಯಲ್ಲಿ ವಾಹನಗಳು ನಿಧಾನವಾಗಿ ಚಲಿಸುವಂತಾಯಿತು.
ರಸ್ತೆಯಲ್ಲಿ ಮರದ ರಂಬೆಗಳು ಬಿದ್ದ ಕಾರಣ ಮಳೆ ಮತ್ತು ಗಾಳಿ ನಿಂತ ನಂತರ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರದ ರಂಬೆಗಳನ್ನು ತೆರವುಗೊಳಿಸಿದರು. ಟೆಂಪೊ ಮೇಲೆ ಬಿದ್ದಿದ್ದ ರಂಬೆಗಳನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.