ADVERTISEMENT

ಕೊಡಿಗೇನಹಳ್ಳಿ | ವಿವಿಧ ದೇವಸ್ಥಾನದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:35 IST
Last Updated 11 ಮೇ 2025, 14:35 IST
ಗುಂಡಗಲ್ಲು ಗ್ರಾಮದ ದೇವಸ್ಥಾನದಲ್ಲಿ ಭಾನುವಾರ ನಿವೃತ್ತ ಪ್ರೊ.ಕೆ.ಪಿ.ಜೆ. ರೆಡ್ಡಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು
ಗುಂಡಗಲ್ಲು ಗ್ರಾಮದ ದೇವಸ್ಥಾನದಲ್ಲಿ ಭಾನುವಾರ ನಿವೃತ್ತ ಪ್ರೊ.ಕೆ.ಪಿ.ಜೆ. ರೆಡ್ಡಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು   

ಕೊಡಿಗೇನಹಳ್ಳಿ: ಭಾರತದ ಸೈನಿಕರ ಒಳಿತಿಗೆ ನಿವೃತ್ತ ಅಧಿಕಾರಿಗಳು ಹಾಗೂ ಮುಖಂಡರು ಭಾನುವಾರ ಗುಂಡಗಲ್ಲು ಕಲಿದೇವಪುರ, ಉಪ್ಪಾರಹಳ್ಳಿ, ಯಾಕಾರ್ಲಹಳ್ಳಿ ಹಾಗೂ ಕಡಗತ್ತೂರು ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ನಿವೃತ್ತ ಪ್ರೊ. ಕೆಪಿಜೆ ರೆಡ್ಡಿ ಮಾತನಾಡಿ, ‘ದೇಶದ ವಿಚಾರಕ್ಕೆ ಬಂದಾಗ ಸೈನಿಕರ ಕಷ್ಟದಲ್ಲಿ ಅವರ ಪರ ನಿಲ್ಲುವ ಮನಸ್ಥಿತಿ ಬೆಳೆಸಿಕೊಳ್ಳುವುದು ಭಾರತೀಯನ ಕರ್ತವ್ಯ. ಅವರ ಕಷ್ಟದ ಸಮಯದಲ್ಲಿ ನಾವು ನಿಂತಾಗ ಮಾತ್ರ ದೇಶಕ್ಕೆ ಸಂಬಂಧಪಟ್ಟ ಪ್ರಜೆಗಳು ಎಂಬಂತಾಗುತ್ತದೆ. ದ್ರೋಣ್‌ದಲ್ಲಿನ ಬಾಂಬ್ (ಆರ್‌ಡಿಎಕ್ಸ್) ಕಂಡು ಹಿಡಿದಿದ್ದು ನಾನು ಮತ್ತು ನನ್ನ ವಿದ್ಯಾರ್ಥಿಗಳು ಎಂದರು.

ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ ಬಳಿಯಿರುವ ಸುಮಾರು 90 ಎಕರೆ ಜಾಗದಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಮಾತ್ರ ಇರಬೇಕು ಎಂದು ಸರ್ಕಾರದ ಆದೇಶ ಇದೆ. ಮಧುಗಿರಿ ಜಿಲ್ಲೆಯಾದರೆ ಕೊಡಿಗೇನಹಳ್ಳಿ ತಾಲ್ಲೂಕು ಆಗಲಿದೆ. ಆಗ ಇಲ್ಲಿ ವಿಶ್ವವಿದ್ಯಾಲಯ ಆರಂಭಿಸಬಹುದು ಎಂದು ಸಚಿವ ಕೆ.ಎನ್. ರಾಜಣ್ಣ, ಡಾ.ಜಿ. ಪರಮೇಶ್ವರ್ ಹಾಗೂ ಜಯಚಂದ್ರ ಅವರ ಭರವಸೆ ನೀಡಿದ್ದಾರೆ. ಕಲಿದೇವಪುರದಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.

ADVERTISEMENT

ಎ. ಮೀರಾ, ಜಿ.ಆರ್.ಗೋಪಾಲರೆಡ್ಡಿ, ಜಿ.ವೈ.ರಾಜಶೇಖರರೆಡ್ಡಿ, ರಾಘವೇಂದ್ರರೆಡ್ಡಿ, ತಿಪ್ಪಾರೆಡ್ಡಿ, ರಾಧಕೃಷ್ಣ ರೆಡ್ಡಿ, ಅಶ್ವತ್ಥ ರೆಡ್ಡಿ, ರವೀಂದ್ರ ರೆಡ್ಡಿ, ಅಶ್ವತ್ಥಪ್ಪ, ಲಕ್ಷ್ಮಿನಾರಾಯಣ, ರವಿ, ಮಂಜುನಾಥ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಶ್ರೀನಾಥ್ ರೆಡ್ಡಿ, ಭಾಸ್ಕರ್ ರೆಡ್ಡಿ, ಲಕ್ಷ್ಮಿನಾರಾಯಣ, ಶ್ರೀರಾಮರೆಡ್ಡಿ, ಲೋಕೇಶರೆಡ್ಡಿ, ಕೃಷ್ಣಪ್ಪ, ನರಸಿಂಹಮೂರ್ತಿ, ಗಂಗರಾಜು, ಟಿ. ರವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.