ADVERTISEMENT

ತುಮಕೂರು: ಸಿಗರೇಟ್‌ ಖರೀದಿ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:08 IST
Last Updated 19 ಫೆಬ್ರುವರಿ 2026, 6:08 IST
   

ತುಮಕೂರು: ನಗರದ ಕ್ಯಾತ್ಸಂದ್ರ ಬಳಿ ಅಂಗಡಿಯಲ್ಲಿ ಕಳ್ಳನೊಬ್ಬ ಸಿಗರೇಟ್‌ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಈ ವಿಡಿಯೊ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾರ್ವತಮ್ಮ ಅವರು ಕ್ಯಾತ್ಸಂದ್ರ ಬಳಿ ಪ್ರಾವಿಜನ್‌ ಸ್ಟೋರ್‌ ನಡೆಸುತ್ತಿದ್ದಾರೆ. ಸಿಗರೇಟ್‌ ಖರೀದಿ ನೆಪದಲ್ಲಿ ಅಂಗಡಿ ಬಳಿ ಬಂದ ಕಳ್ಳನೊಬ್ಬ ಮಹಿಳೆ ಕೊರಳಲ್ಲಿ ಇದ್ದ ಸರ ಕಿತ್ತು ಓಡಿ ಹೋಗಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

₹1.50 ಲಕ್ಷ ಮೌಲ್ಯದ 32 ಗ್ರಾಂ ಚಿನ್ನದ ಸರ ಕಳೆದುಕೊಂಡ ಪಾರ್ವತಮ್ಮ ಕ್ಯಾತ್ಸಂದ್ರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.