ADVERTISEMENT

ತುಮಕೂರು | ಪಾರ್ಟ್‌ಟೈಮ್‌ ಕೆಲಸ: ₹6.36 ಲಕ್ಷ ವಂಚನೆ

ಹೆಚ್ಚಿನ ಹಣ ಸಂಪಾದನೆಯ ಆಮಿಷ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:59 IST
Last Updated 13 ಫೆಬ್ರುವರಿ 2026, 6:59 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ತಿಪಟೂರು ತಾಲ್ಲೂಕು ಮಾದಿಹಳ್ಳಿಯ ಶಿವಕಿರಣ್‌ ಕುಮಾರ್‌ ಎಂಬುವರು ₹6.36 ಲಕ್ಷ ಕಳೆದುಕೊಂಡಿದ್ದಾರೆ.

ಟೆಲಿಗ್ರಾಮ್‌ ಮೂಲಕ ಪರಿಚಯವಾದ ಆರೋಪಿಗಳು ಗೂಗಲ್‌ನಲ್ಲಿ ರಿವ್ಯೂ ನೀಡುತ್ತಾ, ಹೆಚ್ಚಿನ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದಾರೆ. ಮೊದಲಿಗೆ ₹1 ಸಾವಿರ ಪಾವತಿಸಬೇಕು ಎಂದಿದ್ದಾರೆ. ಶಿವಕಿರಣ್‌ ಅದರಂತೆ ಮಾಡಿದ್ದಾರೆ. ನಂತರ ₹2 ಸಾವಿರ ಪಾವತಿಸಿದ್ದು, ಅವರ ಖಾತೆಗೆ ₹4,110 ವರ್ಗಾಯಿಸಿದ್ದಾರೆ.

ಇದೇ ರೀತಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿ ₹50 ಸಾವಿರ ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ನಿಮ್ಮ ಖಾತೆ ಫ್ರೀಜ್‌ ಆಗಿದ್ದು, ₹1 ಲಕ್ಷ ವರ್ಗಾಯಿಸಿದರೆ ಅನ್‌ಫ್ರೀಜ್‌ ಮಾಡಲಾಗುವುದು ಎಂದಿದ್ದಾರೆ. ಶಿವಕಿರಣ್‌ ಆರೋಪಿಗಳು ತಿಳಿಸಿದ ಬ್ಯಾಂಕ್‌ ಖಾತೆಗೆ ಹಣ ಹಾಕಿದ್ದಾರೆ.

ADVERTISEMENT

ಜಿಎಸ್‌ಟಿ, ತೆರಿಗೆ ಎಂದು ನಾನಾ ಕಾರಣ ಹೇಳಿ ₹6,50,380 ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಶಿವಕಿರಣ್‌ಗೆ ₹14,110 ವಾಪಸ್‌ ಹಾಕಿದ್ದಾರೆ. ವಂಚನೆ ಮಾಡಿದ ಆರೋಪಿಗಳ ವಿರುದ್ಧ ಕ್ರಮಕೈಗೊಂಡು ಹಣ ವಾಪಸ್‌ ಕೊಡಿಸುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.