ADVERTISEMENT

ಮಧುಗಿರಿ‌ | ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 7:27 IST
Last Updated 9 ಜನವರಿ 2024, 7:27 IST

ಮಧುಗಿರಿ‌: ತಾಲ್ಲೂಕಿನ ಹೊಸಕೆರೆ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಶೇಖರಣೆ ಮಾಡಿದ್ದ ದಿನಸಿ ಪದಾರ್ಥಗಳನ್ನು ಕಳ್ಳರು ಭಾನುವಾರ ರಾತ್ರಿ ಕಳ್ಳತನ ಮಾಡಿದ್ದಾರೆ.

ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಇಟ್ಡಿದ್ದ 1030 ಕೆ.ಜಿ ಅಕ್ಕಿ, 125 ಕೆ.ಜಿ ಗೋಧಿ, 262 ಕೆ.ಜಿ ಬೇಳೆ ಸೇರಿದಂತೆ ಅಂಗನವಾಡಿಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಹಾಗೂ ಮತ್ತಿತರರ ಪದಾರ್ಥಗಳನ್ನು ಭಾನುವಾರದ ಕಳ್ಳತನ ಮಾಡಲಾಗಿದೆ.

ಸೋಮವಾರ ಶಾಲೆಯ ಮುಖ್ಯ ಶಿಕ್ಷಕಿ ವೆಂಕಟಲಕ್ಷಮ್ಮ ಬಾಗಿಲು ತೆಗೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಕ್ಷಕಿ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.