ADVERTISEMENT

ಮ್ಯಾರಥಾನ್‌: ಮಹಾದೇವಿ, ಆಲಿಯಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 6:54 IST
Last Updated 2 ಫೆಬ್ರುವರಿ 2026, 6:54 IST
ತುಮಕೂರಿನಲ್ಲಿ ಭಾನುವಾರ ತುಮಕೂರು ರನ್ನರ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್‌ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ರನ್ನರ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ರವಿ, ಮುಖಂಡರಾದ ಸತೀಶ್ ಮಲ್ಲಣ್ಣ, ರವೀಶ್ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಭಾನುವಾರ ತುಮಕೂರು ರನ್ನರ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್‌ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ರನ್ನರ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ರವಿ, ಮುಖಂಡರಾದ ಸತೀಶ್ ಮಲ್ಲಣ್ಣ, ರವೀಶ್ ಇತರರು ಉಪಸ್ಥಿತರಿದ್ದರು   

ತುಮಕೂರು: ತುಮಕೂರು ರನ್ನರ್ಸ್‌ ಕ್ಲಬ್‌ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಮಹಾದೇವಿ, ಸೈಯದ್‌ ಆಲಿಯಾ, ಶ್ರವಂತ್‌ ಗೌಡ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ 5 ಕಿಲೊ ಮೀಟರ್‌, 10 ಕಿಲೊ ಮೀಟರ್‌ ಮತ್ತು 21 ಕಿಲೊ ಮೀಟರ್‌ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಓಟಗಾರರು ಪಾಲ್ಗೊಂಡಿದ್ದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.

ADVERTISEMENT

ಮಹಿಳೆಯರ ವಿಭಾಗ: 5 ಕಿಲೊ ಮೀಟರ್ ಓಟ– ಮಹಾದೇವಿ, ಭೀಮಾ ಬಾಯಿ, ಪುಣ್ಯ. 10 ಕಿ.ಮೀ– ಸೈಯದ್‌ ಆಲಿಯಾ ಶೇಖ್‌, ರಂಜನಾ, ಎಸ್‌.ಯು.ಸೌಮ್ಯಾ. 21 ಕಿ.ಮೀ– ಮಮತಾ ರಾವತ್‌, ಎಚ್‌.ಕೆ.ಅನುರಾಧ, ವೈಶಾಲಿ ಕುಲಕರ್ಣಿ.

ಪುರುಷರ ವಿಭಾಗ: 5 ಕಿಲೊ ಮೀಟರ್– ಶ್ರವಂತ್‌ ಗೌಡ, ಕೌಶಿಕ್‌, ಯೋಗಿಶ್‌ ದೇವಡಿಗ. 10 ಕಿ.ಮೀ– ರಾಜಶೇಖರ್‌ ದೊಡ್ಡಯ್ಯ, ಸುನಿಲ್‌ ಕರಿಯಪ್ಪ, ಸಿ.ಸಿದ್ದರಾಜು. 21 ಕಿ.ಮೀ– ಎಂ.ವೈ.ಸಂದೀಪ್‌ಕುಮಾರ್‌, ಎಸ್‌.ಗೌತಮ್‌, ಕೆ.ಜಿ.ಬಾಲಾಜಿ.

ಚಾಲನೆ: ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು. ತುಮಕೂರು ರನ್ನರ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ಸಿ.ಎಂ.ರವಿ, ಪದಾಧಿಕಾರಿಗಳಾದ ದರ್ಶನ್‌, ಸುನೀತಾ, ಸುಹಾಸ್‌, ಮುಖಂಡರಾದ ಚೆನ್ನಬಸವಪ್ರಸಾದ್‌, ರುದ್ರಪಕಾಶ್‌, ಅಮಿತ್‌, ಸತೀಶ್ ಮಲ್ಲಣ್ಣ, ಪರಮೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.