ತುಮಕೂರು: ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿ ಗ್ರಾಮದ ಕಟ್ಟೆಯಲ್ಲಿ ಬುಧವಾರ ಸಂಜೆ ಹಸು ಮೈ ತೊಳೆಯಲು ಹೋಗಿ ತಾತ ಹಾಗೂ ಮೊಮ್ಮಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕುಂಟೆಗೌಡನಹಳ್ಳಿ ಗ್ರಾಮದ ಕರಿಯಣ್ಣ (60) ಹಾಗೂ ಮೊಮ್ಮಗ ದಿಲೀಪ್ (12) ಮೃತರು. ಹಸುಗಳಿಗೆ ಕಟ್ಟೆಯಲ್ಲಿ ಮೈ ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೊಮ್ಮಗ ದಿಲೀಪ್ ನೀರಿನಲ್ಲಿ ಬಿದ್ದಿದ್ದಾನೆ. ಮೊಮ್ಮಗನನ್ನು ಕಾಪಾಡಲು ತಾತ ಕರಿಯಣ್ಣ ಸಹ ನೀರಿಗೆ ದುಮುಕಿದ್ದು ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತ ಪಟ್ಟಿದ್ದಾರೆ.
ಕುಟುಂಬದವರ ಅಕ್ರಂದನ ಮುಗಿಲು ಮಟ್ಟಿತ್ತು. ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.