ADVERTISEMENT

ಶಿರಾ ನಗರಸಭೆ ಉಪಚುನಾವಣೆ ಮತದಾನ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 20 ಮೇ 2022, 3:52 IST
Last Updated 20 ಮೇ 2022, 3:52 IST
   

ತುಮಕೂರು: ಶಿರಾ ನಗರಸಭೆಯ ವಾರ್ಡ ನಂ 21ರ ಉಪಚುನಾವಣೆ ಮತದಾನ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಗಿದ್ದು ಶಾಂತ ರೀತಿಯಿಂದ ನಡೆಯುತ್ತಿದೆ.

ನಗರಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚಾಂದ್ ಪಾಷ ನಿಧನದಿಂದಾಗಿ ಚುನಾವಣೆ ಮುಂದೂಡಲಾಗಿತ್ತು.

ನಗರದ ಅಸಾರ್ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದೆ.

ADVERTISEMENT

ತುಂತುರು ಮಳೆಯಲ್ಲಿ ಜನರು ಉತ್ಸುಕರಾಗಿ ಬಂದು ಮತದಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನಗರಸಭೆ ಮಾಜಿ ಅಧ್ಯಕ್ಷದಿ.ಚಾಂದ್ ಪಾಷ ಪುತ್ರ ಇರ್ಷಾದ್ ಪಾಷ, ಜೆಡಿಎಸ್ ಪಕ್ಷದಿಂದ ಎಚ್.ವಾಸಿಲ್ ಅಹಮದ್ ಹಾಗೂ ಪಕ್ಷೇತರರಾಗಿ ಲುತ್ ಫುಲ್ಲಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.