ತುಮಕೂರು: ಪರಿಶಿಷ್ಟಮಹಿಳೆಗೆ ದೇಗುಲದ ಒಳಗೆ ಬಿಡದೆ ಜಾತಿನಿಂದನೆ ಮಾಡಿದ ಆರೋಪದ ಮೇರೆಗೆ ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ವಿದ್ಯಾಚೌಡೇಶ್ವರಿ ದೇವಸ್ಥಾನದ ಬಾಲಮಂಜುನಾಥ ಸ್ವಾಮೀಜಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ದೇವಸ್ಥಾನಕ್ಕೆ ಕರ್ಪೂರ ಹಚ್ಚಲು ಹೋದಾಗ ತಡೆದರು. ಮಾದಿಗಳು ಬರುತ್ತಿದ್ದಾಳೆ. ದೇವಾಲಯದ ಬಾಗಿಲು ಹಾಕಿ’ ಎಂದು ಸ್ವಾಮೀಜಿ ಆಪ್ತರಿಗೆ ಸೂಚಿಸಿದ್ದರು. ಒಳಗೆ ಹೋಗದಂತೆ ಆಪ್ತರು ಬಾಗಿಲು ಹಾಕಿದರು ಎಂದು ಮಾಗಡಿ ತಾಲ್ಲೂಕಿನ ಚಂದುರಾಯನಹಳ್ಳಿ ನಿವಾಸಿ ಎಸ್.ಜಿ.ವನಜಾ ಸೋಮವಾರ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಸ್ವಾಮೀಜಿ, ಅವರ ಚಿಕ್ಕಮ್ಮ ನಾಗಮ್ಮ, ತಾಯಿ ರಾಜಮ್ಮ, ಆಪ್ತ ಅಭಿಷೇಕ್, ಮಂಜುನಾಥ್ ವಿರುದ್ಧ ಡಿಸಿಆರ್‌ಇ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.