ತುಮಕೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳತಿಯ ಮಾತು ನಂಬಿ, ನಗರದ ಬನಶಂಕರಿಯ ಉದ್ಯಮಿ ಎಸ್.ದಿಲೀಪ್‌ಕುಮಾರ್ ₹8.30 ಲಕ್ಷ ಕಳೆದುಕೊಂಡಿದ್ದಾರೆ.
ದಿಲೀಪ್ ಕುಮಾರ್ ಅವರಿಗೆ ಫೇಸ್‌ಬುಕ್‌ನಲ್ಲಿ ಅದ್ವಿಕಾ ಎಂಬುವರು ಪರಿಚಯವಾಗಿದ್ದು, ಪರಸ್ಪರ ನಂಬರ್ ಬದಲಾಯಿಸಿಕೊಂಡು ಕೆಲ ದಿನ ಮಾತನಾಡಿದ್ದಾರೆ. ಅದ್ವಿಕಾ ಷೇರು ಮಾರುಕಟ್ಟೆ ಬಗ್ಗೆ ತಿಳಿಸಿ, ‘Aimand Win’ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ದಿಲೀಪ್ ನಂಬರ್ ಸೇರಿಸಿದ್ದರು. ಸದರಿ ಗ್ರೂಪ್‌ನಲ್ಲಿ ಹಣ ಹೂಡಿಕೆ ಕುರಿತು ಮಾಹಿತಿ ನೀಡಿದ್ದಾರೆ.
ಅದ್ವಿಕಾ ಕಳುಹಿಸಿದ https://app.ggfpinvest.com /#pages/login/index ಲಿಂಕ್ ಕ್ಲಿಕ್ ಮಾಡಿ, GGFP EXCHANGE ವೆಬ್‌ಪೇಜ್‌ನಲ್ಲಿ ಲಾಗಿನ್ ಆಗಿದ್ದಾರೆ. ಇದರಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರತಿ ದಿನ ಮಸೇಜ್ ಮಾಡಿದ್ದಾರೆ. ದಿಲೀಪ್ ಆ. 11ರಿಂದ 19ರ ವರೆಗೆ ಹಂತಹಂತವಾಗಿ ಒಟ್ಟು ₹8.30 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
GGFP EXCHANGE ಪೇಜ್‌ನಲ್ಲಿ ಹಣ ದುಪ್ಪಟ್ಟಾಗಿದೆ ಎಂದು ತೋರಿಸಿದೆ. ವಿತ್ ಡ್ರಾ ಮಾಡಲು ಹೋದಾಗ ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ವಾಪಸ್ ಬರುತ್ತದೆ ಎಂದು ವಿವರಿಸಿದೆ. ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.