ADVERTISEMENT

ಕುಂದು ಕೊರತೆ | ತುಮಕೂರು: ಸ್ವಚ್ಛತೆ ಮಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:18 IST
Last Updated 10 ಜುಲೈ 2025, 5:18 IST
<div class="paragraphs"><p>ತುಮಕೂರಿನ ಎಸ್‌.ಎಸ್‌.ವೃತ್ತದ ಫುಡ್‌ ಸ್ಟ್ರೀಟ್‌ ಬಳಿ ಕಸ ಸುರಿದಿರುವುದು</p></div>

ತುಮಕೂರಿನ ಎಸ್‌.ಎಸ್‌.ವೃತ್ತದ ಫುಡ್‌ ಸ್ಟ್ರೀಟ್‌ ಬಳಿ ಕಸ ಸುರಿದಿರುವುದು

ತುಮಕೂರು ಎಸ್‌.ಎಸ್‌.ವೃತ್ತ ಹತ್ತಿರದ ಫುಡ್‌ ಸ್ಟ್ರೀಟ್‌ ಬಳಿ ಸ್ವಚ್ಛತೆ ಮಾಯವಾಗಿದೆ. ಕಸ, ಪ್ಲಾಸ್ಟಿಕ್‌ ತಟ್ಟೆ ಎಲ್ಲೆಂದರಲ್ಲಿ ರಾಶಿ ಹಾಕಲಾಗಿದೆ.

ಊಟ, ತಿಂಡಿಗೆ ಫುಡ್‌ ಸ್ಟ್ರೀಟ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಇಂತಹ ಸ್ಥಳದಲ್ಲಿಯೇ ಸ್ವಚ್ಛತೆ ಇಲ್ಲವಾಗಿದೆ. ಹಲವು ದಿನಗಳಿಂದ ಕಸ ಗುಡ್ಡೆ ಹಾಕಿದ್ದರೂ ತೆರವುಗೊಳಿಸಿಲ್ಲ. ಮಹಾನಗರ ಪಾಲಿಕೆಯ ಕಸ ಸಂಗ್ರಹ ಆಟೊಗಳು ಪ್ರತಿ ದಿನ ಇಲ್ಲಿಗೆ ಬರುತ್ತಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಬಂದವರು ಕುಳಿತು ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಹೋಟೆಲ್‌ ಮಾಲೀಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರ ಆರೋಗ್ಯ ರಕ್ಷಣೆಗೆ ಒತ್ತು ಕೊಡಬೇಕು. ಊಟ, ತಿಂಡಿ ಸೇವಿಸಲು ಬಂದವರು ಅನಾರೋಗ್ಯಕ್ಕೆ ತುತ್ತಾಗದಂತೆ ಕ್ರಮ ವಹಿಸಬೇಕು.

ADVERTISEMENT

-ಪ್ರವೀಣ್‌, ತುಮಕೂರು

ಸ್ವಚ್ಛತೆ ಮಾಯ

ಪಾದಚಾರಿ ರಸ್ತೆ ಹಾಳು

ತುಮಕೂರು ಬಿ.ಎಚ್‌.ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಫುಟ್‌ಪಾತ್‌ ಕುಸಿದಿದೆ. ಸ್ಮಾರ್ಟ್‌ ಸಿಟಿಯಿಂದ ಅಭಿವೃದ್ಧಿಪಡಿಸಿದ ಪಾದಚಾರಿ ರಸ್ತೆ ಕೆಲವೇ ದಿನಗಳಿಗೆ ಹಾಳಾಗಿದೆ.ಸರ್ಕಾರಿ ಕಚೇರಿ ಮುಂದೆ ಇರುವ ಫುಟ್‌ಪಾತ್‌ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ದಿನಗಳಿಂದ ಕುಸಿದ ಸ್ಥಿತಿಯಲ್ಲಿಯೇ ಇದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ನಂದಿನಿ ಮಳಿಗೆ, ಹಾಸ್ಟೆಲ್‌ಗೆ ಹೋಗುವ ವಿದ್ಯಾರ್ಥಿಗಳು ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ತುರ್ತು ಕ್ರಮ ವಹಿಸಿ ರಸ್ತೆ ಸರಿ ಪಡಿಸಬೇಕು.

-ಕೃಷ್ಣಕುಮಾರ್‌, ತುಮಕೂರು

ಸುಗಮ ಸಂಚಾರಕ್ಕೆ ಲಾರಿ ಅಡ್ಡಿ

ತುಮಕೂರು ಗುಂಚಿ ಚೌಕ ವೃತ್ತದ ನಗರ ಠಾಣೆ ಎದುರುಗಡೆ ಇರುವ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಮುಂಭಾಗ ಹಲವು ತಿಂಗಳಿನಿಂದ ಹಳೆಯ ಲಾರಿ ನಿಲ್ಲಿಸಲಾಗಿದೆ. ಪಠ್ಯಪುಸ್ತಕ ತಂದು ಬಿಇಒ ಕಚೇರಿಯಲ್ಲಿ ಸಂಗ್ರಹಿಸಲು ಲಾರಿ ಅಡ್ಡಿಯಾಗುತ್ತಿದೆ.

ಕಿರಿದಾದ ರಸ್ತೆ ಪಕ್ಕದಲ್ಲಿಯೇ ಲಾರಿ ನಿಲ್ಲಿಸಿರುವುದರಿಂದ ಇತರೆ ವಾಹನಗಳು ಮತ್ತು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಲಾರಿ ಪಕ್ಕದಲ್ಲಿಯೇ ನಾಯಿ ಮೃತದೇಹ ಹಾಕಿದ್ದು, ಗಬ್ಬು ವಾಸನೆ ಬೀರುತ್ತಿದೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಕಸ ತಂದು ಹಾಕಲಾಗುತ್ತಿದೆ.

ನಿತ್ಯ ನೂರಾರು ಜನ ಭೇಟಿ ನೀಡುವ ಕಚೇರಿ ಬಳಿ ಅವ್ಯವಸ್ಥೆ ಉಂಟಾಗಿದೆ. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಲಾರಿ ತಂದು ನಿಲ್ಲಿಸಿರುವ ನಗರ ಠಾಣೆ ಪೊಲೀಸರು, ತೆರವಿಗೆ ಮುಂದಾಗಿಲ್ಲ. ಸುಗಮ ಸಂಚಾರ ಹಾಗೂ ವಾಹನ ನಿಲುಗಡೆ ಬಗ್ಗೆ ಪಾಠ ಮಾಡುವ ಪೊಲೀಸರಿಂದಲೇ ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದರೂ ಇತ್ತ ಗಮನ ಹರಿಸಿ ಲಾರಿ ತೆರವು ಮಾಡಿಸಬೇಕು.

-ಶ್ರೀನಿವಾಸ್‌, ತುಮಕೂರು

ತುಮಕೂರಿನ ಸಮಾಜ ಕಲ್ಯಾಣ ಇಲಾಖೆ ಕಚೇರಿ ಬಳಿ ರಸ್ತೆ ಕುಸಿದಿರುವುದು

ತುಮಕೂರಿನ ಬಿಇಒ ಕಚೇರಿ ಮುಂಭಾಗ ಲಾರಿ ನಿಲ್ಲಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.