ADVERTISEMENT

ತುಮಕೂರು: 27ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ

ಹಿಂದೂ ಮಹಾಗಣಪತಿ ಸ್ಥಳ ಬದಲು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 7:55 IST
Last Updated 24 ಆಗಸ್ಟ್ 2025, 7:55 IST
ತುಮಕೂರಿನಲ್ಲಿ ಶನಿವಾರ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯ ಭಿತ್ತಿಪತ್ರ ಬಿಡುಗಡೆ ಗೊಳಿಸಲಾಯಿತು. ಮುಖಂಡರಾದ ಕೋರಿ ಮಂಜುನಾಥ್‌, ವೈ.ಎಚ್.ಹುಚ್ಚಯ್ಯ, ಬಿ.ಎಸ್.ಮಂಜುನಾಥ್‌, ಬಿ.ಜಿ.ಪ್ರದೀಪ್, ಜಿ.ಕೆ.ಶ್ರೀನಿವಾಸ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯ ಭಿತ್ತಿಪತ್ರ ಬಿಡುಗಡೆ ಗೊಳಿಸಲಾಯಿತು. ಮುಖಂಡರಾದ ಕೋರಿ ಮಂಜುನಾಥ್‌, ವೈ.ಎಚ್.ಹುಚ್ಚಯ್ಯ, ಬಿ.ಎಸ್.ಮಂಜುನಾಥ್‌, ಬಿ.ಜಿ.ಪ್ರದೀಪ್, ಜಿ.ಕೆ.ಶ್ರೀನಿವಾಸ ಉಪಸ್ಥಿತರಿದ್ದರು   

ತುಮಕೂರು: ವಿಶ್ವ ಹಿಂದೂ ಪರಿಷತ್‌, ಭಜರಂಗದಳದ ವತಿಯಿಂದ ಆ. 27ರಂದು ನಗರದ ಭದ್ರಮ್ಮ ಛತ್ರ ವೃತ್ತದ ಸೋಮೇಕಟ್ಟೆ ಮಠದ ಆವರಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುತ್ತದೆ.

ಕಳೆದ ಹಲವು ವರ್ಷಗಳಿಂದ ಟೌನ್‌ಹಾಲ್‌ ವೃತ್ತದ ಬಳಿಯ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಸ್ಥಳ ಬದಲಾವಣೆ ಮಾಡಲಾಗಿದೆ.

‘8ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ. ಪ್ರತಿ ದಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಹಾ ಗಣಪತಿ ಉತ್ಸವ ಸಮಿತಿ ಕಾರ್ಯದರ್ಶಿ ಕೋರಿ ಮಂಜುನಾಥ್‌ ಇಲ್ಲಿ ಶನಿವಾರ ಹೇಳಿದರು.

ADVERTISEMENT

‘ಮಕ್ಕಳಿಗೆ ಚಿತ್ರಕಲೆ, ಭಾಷಣ ಸ್ಪರ್ಧೆ, ಸಾಂಸ್ಕೃತಿಕವಾಗಿ ಸಾಮೂಹಿಕ ಸೌಂದರ್ಯ ಲಹರಿ ಪಠಣ, ರುದ್ರ ಪಾರಾಯಣ, ಸಾಮೂಹಿಕ ಗಣ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ ಮುಂದಾದ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಸರ್ಜನೆ ದಿನ ನಗರದ ರಾಜಬೀದಿಗಳಲ್ಲಿ ವಿವಿಧ ಕಲಾತಂಡಗಳ ಮೆರವಣಿಗೆ ಏರ್ಪಡಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾ ಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ‘ಹಿಂದೂ ಸಮಾಜ ಒಗ್ಗೂಡಿಸುವುದು ಮಹಾಗಣಪತಿ ಮಹೋತ್ಸವದ ಉದ್ದೇಶ. ಯುವ ಜನರಲ್ಲಿ ಚೈತನ್ಯ ತುಂಬಿ, ಸಂಘಟನೆ ವಿಸ್ತರಿಸಲಾಗುತ್ತದೆ. ದೇಶದಲ್ಲಿ ಭಜರಂಗ ದಳದ 13 ಲಕ್ಷ ಜನ ರಾಷ್ಟ್ರ ನಿರ್ಮಾಣ, ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದರು.

ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್‌, ಮುಖಂಡರಾದ ಬಿ.ಜಿ.ಪ್ರದೀಪ್, ಜಿ.ಕೆ.ಶ್ರೀನಿವಾಸ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.