ADVERTISEMENT

ಹಸಿದವರಿಗೆ ಸಿದ್ಧಗಂಗೆಯ ಅನ್ನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:14 IST
Last Updated 1 ಏಪ್ರಿಲ್ 2020, 13:14 IST
ಸಿದ್ಧಗಂಗಾ ಮಠದ ದಾಸೋಹ ಭವನದಿಂದ ನಿರಾಶ್ರಿತರು, ನಿರ್ಗತಿಕರಿಗೆ ನೀಡಲು ಊಟ ಕೊಂಡೊಯ್ಯಲಾಯಿತು
ಸಿದ್ಧಗಂಗಾ ಮಠದ ದಾಸೋಹ ಭವನದಿಂದ ನಿರಾಶ್ರಿತರು, ನಿರ್ಗತಿಕರಿಗೆ ನೀಡಲು ಊಟ ಕೊಂಡೊಯ್ಯಲಾಯಿತು   

ತುಮಕೂರು: ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ಅನಾಥರು, ಭಿಕ್ಷುಕರು, ನಿರ್ಗತಿಕರ ಹಸಿವು ನೀಗಿಸಲು ಸಿದ್ಧಗಂಗಾ ಮಠ ಸಹ ಕೈಜೋಡಿಸಿದೆ. ನಿತ್ಯ ಇವರಿಗೆ ಆಹಾರ ಒದಗಿಸುತ್ತಿದೆ.

ಜಿಲ್ಲಾಡಳಿತದ ಸಿಬ್ಬಂದಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಮಠಕ್ಕೆ ತೆರಳಿ ಅಲ್ಲಿಂದ ಆಹಾರವನ್ನು ಕೊಂಡೊಯ್ದು ವಿತರಿಸುತ್ತಿದ್ದಾರೆ.

‘ಜಿಲ್ಲಾಡಳಿತವೇ ಒಂದು ವಾಹನವನ್ನು ಕಳುಹಿಸುತ್ತದೆ. ಸುಮಾರು 500 ಜನರಿಗೆ ನಿತ್ಯ ಆಹಾರ ತೆಗೆದುಕೊಂಡು ಹೋಗುವರು. ಇಷ್ಟೇ ಜನರಿಗೆ ಊಟ ತೆಗೆದುಕೊಂಡು ಹೋಗಿ ಎಂದೇನೂ ಹೇಳಿಲ್ಲ. ಎಷ್ಟು ಜನರಿಗಾದರೂ ತೆಗೆದುಕೊಂಡು ಹೋಗಬಹುದು. ಅವರೇ ಪಾತ್ರೆಗಳನ್ನು ತರುತ್ತಾರೆ. ನಾವು ಅವುಗಳಿಗೆ ತುಂಬಿಸಿ ಕಳುಹಿಸುತ್ತೇವೆ’ ಎಂದು ದಾಸೋಹದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ಬುಧವಾರ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದ ಕಾರ್ಯಕ್ರಮ ಇದ್ದ ಕಾರಣ ಪಾಯಸ, ಚಿತ್ರಾನ್ನ ಮಾಡಿದ್ದೆವು. 2,000 ಜನರಿಗೆ ಊಟ ತೆಗೆದುಕೊಂಡು ಹೋದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.