ADVERTISEMENT

ಬೆಳ್ಳಂ ಬೆಳಿಗ್ಗೆ ಗ್ರಾಮಸ್ಥರಿಗೆ ದಿಗಿಲು ಹುಟ್ಟಿಸಿದ ಅಪರಿಚಿತರು!

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 8:53 IST
Last Updated 30 ಜೂನ್ 2019, 8:53 IST
   

ತೋವಿನಕೆರೆ (ತುಮಕೂರು ಜಿಲ್ಲೆ): ಇಲ್ಲಿನಸಿಎಸ್‌ಜಿ ಪಾಳ್ಯದಲ್ಲಿ ಭಾನುವಾರ ಬೆಳ್ಳಂ ಬೆಳಿಗ್ಗೆ ಅಪರಿಚಿತ ಮೂವರು ಪುರುಷರು, ಮೂವರು ಮಹಿಳೆಯರು ಸೇರಿ ಒಟ್ಟು 6 ಮಂದಿ ಗ್ರಾಮದ ಕೇವಲ ಮಹಿಳೆಯರ ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ ಕೇಳಿ ಭಾವಚಿತ್ರಗಳನ್ನು ಮೊಬೈಲುಗಳಲ್ಲಿ ಸೆರೆ ಹಿಡಿಯುತ್ತಿದ್ದುದ್ದಕ್ಕೆ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳಿಗ್ಗೆಯೇ ಕಾರಿನಲ್ಲಿ ಗ್ರಾಮದೊಳಗೆ ಬಂದ ಈ ಆರು ಜನರ ತಂಡವು ಗ್ರಾಮದ ಮಹಿಳೆಯರನ್ನಷ್ಟೇ ಮಾತಿಗೆಳೆದಿದೆ. ಆಧಾರ್ ಸಂಖ್ಯೆ ಹೇಳಿ, ಮೊಬೈಲ್ ಸಂಖ್ಯೆ ಕೊಡಿ, ಹಾಗೇ ನಿಂತ್ಕಳ್ಳಿ ಎಂದು ಯಾವ ಸ್ಥಿತಿಯಲ್ಲಿ ಮಹಿಳೆಯರು ಇರುತ್ತಾರೊ ಅದೇ ಸ್ಥಿತಿಯಲ್ಲಿಯೇ ( ಮನೆ ಅಂಗಳದಲ್ಲಿ ಕಸ ಗೂಡಿಸುವ, ಶೌಚಾಲಯಕ್ಕೆ ತೆರಳುವ ಸ್ಥಿತಿಯಲ್ಲಿ) ಭಾವಚಿತ್ರ ಸೆರೆ ಹಿಡಿದಿದ್ದಾರೆ.

ಕೇವಲ ಮಹಿಳೆಯರದ್ದಷ್ಟೇ ಯಾಕೆ ಮಾಹಿತಿ ಪಡೆಯುತ್ತಿದ್ದೀರಾ? ಪುರುಷರದ್ದು ಯಾಕೆ ಬೇಡ? ಯಾವ ಉದ್ದೇಶಕ್ಕೆ ಈ ವಿವರ ಪಡೆಯುತ್ತಿದ್ದೀರಿ ಎಂದು ಗ್ರಾಮಸ್ಥರು ವಿಚಾರಿಸಿದ್ದಾರೆ. ತಂಡದ ಒಬ್ಬೊಬ್ಬರು ಒಂದೊಂದು ಹೇಳಿಕೆ ನೋಡಿದ್ದಾರೆ. ಕೆಲವರು ಯೂ ಟ್ಯೂಬ್ ಗೆ ಹಾಕ್ತೇವೆ. ಸಂಘ ಸಂಸ್ಥೆಗಳಿಂದ ಸಹಾಯ ಬರುತ್ತದೆ ಎಂದು ಒಬ್ಬರು ಹೇಳಿದರೆ, ಸರ್ಕಾರದ ಪಡಿತರ ಕಾರ್ಡ್ ಪರಿಶೀಲನೆಗೆ ಎಂದು ಹೇಳಿದ್ದಾರೆ. ಈ ಹೇಳಿಕೆಗಳಿಂದ ಅನುಮಾನಗೊಂಡ ಗ್ರಾಮಸ್ಥರು ಹಿಡಿದು ಗ್ರಾಮದ ಔಟ್ ಪೋಸ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇವರ ಹೆಸರು, ಎಲ್ಲಿಯವರು ಎಂಬುದು ತಿಳಿದಿಲ್ಲ. ಯಾವ ಉದ್ದೇಶಕ್ಕೆ ಈ ಗ್ರಾಮಕ್ಕೆ ಬಂದಿದ್ದರು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಎಸ್‌ಜಿ ಪಾಳ್ಯದಲ್ಲಿ ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ಮೂವರು ಮಹಿಳೆಯರು, ಮೂವರು ಪುರುಷರು ಅಗಮಿಸಿ ಮಹಿಳೆಯರು ಚಿತ್ರ ಹಾಗೂ ಮೊಬ್ಯಲ್ ನಂ ಸಂಗ್ರಹಿಸುತ್ತಿದ್ದರು. ಕಾರಣ ಕೇಳಿದ ಮಹಿಳೆಯರಿಗೆ ಸರಿಯಾದ ರೀತಿ ಮಾಹಿತಿ ನೀಡಿಲ್ಲ. ಪ್ರತಿ ಮಹಿಳೆಯರಿಗೆ ಒಂದೋಂದು ಕಾರಣ ನೀಡಿದ್ದಾರೆ. ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗೆ ಅವರುಗಳನ್ನು ಕರೆದುಕೊಂಡು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.