ADVERTISEMENT

3 ದಿನದಲ್ಲಿ ಫಲಿತಾಂಶ: ತುಮಕೂರು ವಿಶ್ವವಿದ್ಯಾನಿಲಯ ಸಾಧನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:34 IST
Last Updated 28 ಸೆಪ್ಟೆಂಬರ್ 2021, 3:34 IST

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗವು ಪರೀಕ್ಷೆ ನಡೆಸಿದ ಮೂರು ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದೆ.

ಸೆ. 23ರಂದು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ ಪದವಿಯ ಕೊನೆಯ ಪರೀಕ್ಷೆ ಪೂರ್ಣಗೊಂಡಿತ್ತು. ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮತ್ತು ಮಧುಗಿರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಮುಗಿದ ಎರಡೇ ದಿನಗಳಲ್ಲಿ ಪ್ರಾಧ್ಯಾಪಕರು ಮೌಲ್ಯಮಾಪನ ಕಾರ್ಯ ಮುಗಿಸಿದ್ದಾರೆ. ಮೂರನೇ ದಿನ ವಿ.ವಿ ಫಲಿತಾಂಶ ಪ್ರಕಟಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೋವಿಡ್ ಎರಡನೇ ಅಲೆಯ ಬಳಿಕ ಪುನರಾರಂಭವಾದ ರಾಜ್ಯದ ವಿಶ್ವವಿದ್ಯಾಲಯಗಳು ಇನ್ನೂ ಪಾಠ-ಪ್ರವಚನ ಮುಗಿಸುವುದರ ಒಳಗೇ ತುಮಕೂರು ವಿ.ವಿ ಎಂ.ಎ ಅಂತಿಮ ವರ್ಷದ ಫಲಿತಾಂಶ ಘೋಷಿಸಿದೆ.

ADVERTISEMENT

ಶೀಘ್ರ ಫಲಿತಾಂಶ ಪ್ರಕಟಿಸಲು ಕಾರಣರಾದ ಪ್ರಾಧ್ಯಾಪಕರು, ಪರೀಕ್ಷಾಂಗ ವಿಭಾಗವನ್ನು ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.