ADVERTISEMENT

ಶಸ್ತ್ರ ಚಿಕಿತ್ಸಕರ ಕೊಠಡಿಯಲ್ಲಿ ನಾಟಕೀಯ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 11:21 IST
Last Updated 29 ಫೆಬ್ರುವರಿ 2020, 11:21 IST
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾಗಿ ಡಾ.ಸುರೇಶ್‍ಬಾಬು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಎಚ್.ವೀಣಾ, ಡಾ.ರುದ್ರಮೂರ್ತಿ, ಡಾ.ಪ್ರಕಾಶ್, ಡಾ.ಚಂದನ, ಡಾ.ನಾಗೇಂದ್ರಪ್ಪ ಅವರು ಹೂಗುಚ್ಚ ನೀಡಿ ಶುಭಕೋರಿದರು.
ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾಗಿ ಡಾ.ಸುರೇಶ್‍ಬಾಬು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಎಚ್.ವೀಣಾ, ಡಾ.ರುದ್ರಮೂರ್ತಿ, ಡಾ.ಪ್ರಕಾಶ್, ಡಾ.ಚಂದನ, ಡಾ.ನಾಗೇಂದ್ರಪ್ಪ ಅವರು ಹೂಗುಚ್ಚ ನೀಡಿ ಶುಭಕೋರಿದರು.   

ತುಮಕೂರು: ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರ ಕೊಠಡಿಯು ಶುಕ್ರವಾರ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿ ಆಯಿತು.

ಶಸ್ತ್ರ ಚಿಕಿತ್ಸಕರಾಗಿದ್ದ ಡಾ.ಟಿ.ಎ.ವೀರಭದ್ರಯ್ಯ ಅವರನ್ನು ಗುರುವಾರವೇ (ಫೆ.27) ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದ ಡಾ.ಜಿ.ಎಚ್‌.ಸುರೇಶ್‌ ಬಾಬು ಅವರನ್ನು ನೇಮಕ ಮಾಡಿ ಆದೇಶಿಸಿತ್ತು.

ಅಧಿಕಾರ ಸ್ವೀಕರಿಸಲು ಡಾ.ಸುರೇಶ್ ಬಾಬು ಶುಕ್ರವಾರ ಬೆಳಿಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಗೆ ಬಂದಿದ್ದರು. ಅವರಿಗಿಂತ ಮೊದಲೇ ಬಂದು ಖುರ್ಚಿಯಲ್ಲಿ ಕುಳಿತಿದ್ದ ಡಾ.ಟಿ.ಎ.ವೀರಭದ್ರಯ್ಯ ಅಧಿಕಾರ ಹಸ್ತಾಂತರಿಸಲಿಲ್ಲ ಎನ್ನುವಆರೋಪ ವ್ಯಕ್ತವಾಗಿದೆ. ಕೊನೆಗೆ ಸಿಟಿಸಿ ಫಾರಂಗೂ ಸಹಿ ಹಾಕದೇ ಕಾರನಲ್ಲಿ ತೆರಳಿದ್ದಾರೆ.

ADVERTISEMENT

ನಂತರ ಡಾ.ಸುರೇಶ್ ಬಾಬು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಅವರನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ‘ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಡಾ.ಸುರೇಶ್‌ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.