
ತುರುವೇಕೆರೆ: ಪಟ್ಟಣದ ಹೊರಪೇಟೆಯಲ್ಲಿರುವ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗುರುಪರದೇಶಿ ಕೇಂದ್ರ ಸ್ವಾಮೀಜಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರನ್ನಾಗಿ ಬೊಮ್ಮರಸನಹಳ್ಳಿಯ ವಿಜಯಕುಮಾರ್, ನಿರ್ದೇಶಕರಾಗಿ ಮಹಲಿಂಗಯ್ಯ, ಗುರುಲಿಂಗಮೂರ್ತಿ, ಮರಿಗೌಡ, ರಮೇಶ್, ಯೋಗೀಶ್, ನೀಲಕಂಠಯ್ಯ, ಮಂಜುನಾಥ್, ಚಂದ್ರಶೇಖರಯ್ಯ, ಶಿವಶಂಕರಪ್ಪ, ಸಂಧ್ಯಾ, ಸುಶೀಲ, ಲೋಕೇಶ್, ಜಗದೀಶ್, ಎಚ್.ಆರ್. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು.
ಗುರುಪರದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಸಂಘದಲ್ಲಿ 1,400 ಸದಸ್ಯರು ಇದ್ದಾರೆ. ಇದುವರೆಗೆ ₹31 ಲಕ್ಷ ಲಾಭದಲ್ಲಿದೆ. ಸಂಘದಿಂದ ಸಾಲ ಪಡೆದವರು ಪ್ರಾಮಾಣಿಕವಾಗಿ ಅಸಲು ಮತ್ತು ಬಡ್ಡಿಯನ್ನು ಹಿಂದಿರುಗಿಸುತ್ತಿದ್ದಾರೆ. ಇದರಿಂದ ಸಂಘಕ್ಕೂ ಲಾಭ, ಸಾಲ ಪಡೆದವರಿಗೂ ಲಾಭವಾಗಲಿದೆ ಎಂದರು.
ಸಂಘದ ವ್ಯವಸ್ಥಾಪಕಿ ಬಿ.ವಿ.ವಿದ್ಯಾಶ್ರೀ, ಕ್ಯಾಷಿಯರ್ ಓಂಕಾರ ಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.