ತುರುವೇಕೆರೆ: ತಾಲ್ಲೂಕಿನ ಮಾವಿನಕೆರೆ, ಮೇಲಿನವರಗೇನಹಳ್ಳಿ ಮತ್ತು ಬೆಂಕಿಕೆರೆಯಲ್ಲಿ ಜಲಜೀವನ್ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.
ಮಾವಿನಕೆರೆಯಲ್ಲಿ 380 ಮನೆಗಳಿಗೆ ₹69 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ಮೇಲಿನವರಗೇನಹಳ್ಳಿಯಲ್ಲಿ 427 ಮನೆಗಳಿಗೆ ₹77 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಬೆಂಕಿಕೆರೆಯಲ್ಲಿ 156 ಮನೆಗಳಿಗೆ ₹48 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ನೀಡಲಾಗುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮೂರು ಗ್ರಾಮಗಳಲ್ಲೂ ಪ್ರತ್ಯೇಕವಾಗಿ ನೀರಿಗಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಸುಮಾರು ಮುವತ್ತು ವರ್ಷಗಳ ತನಕ ಈ ಯೋಜನೆ ಕಾರ್ಯಗತ ಆಗಬೇಕಿದೆ ಎಂದರು.
ಮೋಹನ್ ಕುಮಾರ್, ತಾತಯ್ಯ, ಬಲರಾಮೇಗೌಡ, ಶಿವಣ್ಣ, ರೇಣುಕಯ್ಯ, ಜಗದೀಶ್, ಬಲರಾಮಯ್ಯ, ಶಿವಣ್ಣ, ರಾಜಕುಮಾರ್, ಸತೀಶ್ ಕುಮಾರ್, ವಿಜಯೇಂದ್ರ ಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.