ADVERTISEMENT

ತುಮಕೂರು: 234 ಮಂದಿಗೆ ಕೊರೊನಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:00 IST
Last Updated 19 ಸೆಪ್ಟೆಂಬರ್ 2020, 3:00 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 234 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ 155 ಮಂದಿ ಪುರುಷರು ಹಾಗೂ 79 ಮಂದಿ ಮಹಿಳೆಯರು ಇದ್ದಾರೆ. ಅಲ್ಲದೆ ನಾಲ್ಕು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಿಪಟೂರು ನಗರದ 65 ವರ್ಷದ ಪುರುಷ, ಪಾವಗಡ ತಾಲ್ಲೂಕು ವೀರ‍್ಲಗೊಂದಿ ಗ್ರಾಮದ 68 ವರ್ಷದ ಪುರುಷ, ಮಧುಗಿರಿಯ 60 ವರ್ಷದ ಮಹಿಳೆ ಮತ್ತು ಗುಬ್ಬಿ ತಾಲ್ಲೂಕು ನಿಟ್ಟೂರು ಎನ್‌.ಹೊಸಹಳ್ಳಿಯ 64 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕಿನಲ್ಲಿ 62, ಚಿಕ್ಕನಾಯಕನಹಳ್ಳಿ 11, ಗುಬ್ಬಿ 26, ಕೊರಟಗೆರೆ 18, ಕುಣಿಗಲ್ 7, ಮಧುಗಿರಿ 12, ಪಾವಗಡ 23, ಶಿರಾ 8, ತಿಪಟೂರು 55 ಮತ್ತು ತುರುವೇಕೆರೆ ತಾಲ್ಲೂಕಿನ 12 ಮಂದಿಗೆ ಸೋಂಕು ದೃಢವಾಗಿದೆ.

ADVERTISEMENT

ಈವರೆಗೆ ಜಿಲ್ಲೆಯಲ್ಲಿ 243 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು 10,437 ಮಂದಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.