ADVERTISEMENT

ವಿದ್ಯುತ್ ಅವಘಡ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 9:27 IST
Last Updated 17 ಆಗಸ್ಟ್ 2024, 9:27 IST

ಪಾವಗಡ: ತಾಲ್ಲೂಕಿನ ಟಿ.ಎನ್.ಬೆಟ್ಟ ಗ್ರಾಮದ ಬಳಿಯ ಜಮೀನಿನಲ್ಲಿ ಶೇಂಗಾ ಬೆಳೆ ಕಾವಲಿಗೆ ಹೋಗಿದ್ದ ಇಬ್ಬರು ವಿದ್ಯುತ್ ತಗುಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಟಿ.ಎನ್.ಬೆಟ್ಟ ಗ್ರಾಮದ ಅನಿಲ್ (29), ಪುಟ್ಟರಾಜು (34) ಮೃತರು. ಶುಕ್ರವಾರ ರಾತ್ರಿ ಶೇಂಗಾ ಬೆಳೆ ಕಾವಲಿಗಾಗಿ ಜಮೀನಿಗೆ ಹೋಗಿದ್ದಾರೆ. ಕಾಡು ಹಂದಿ, ಕರಡಿ ಬಾರದಂತೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಪುಟ್ಟರಾಜು ಮೃತಪಟ್ಟಿದ್ದಾರೆ. ಪುಟ್ಟರಾಜು ಅವರನ್ನು ಕಾಪಾಡಲು ಟ್ರಾನ್ಸ್ ಫಾರ್ಮರ್ ಕಡೆ ಓಡಿ ಹೋಗುತ್ತಿದ್ದ ಅನಿಲ್ ಅವರಿಗೂ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ.

ಶನಿವಾರ ಬೆಳಗ್ಗೆ ಕೂಲಿ ಕಾರ್ಮಿಕರು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಗಿಲು ಮುಟ್ಟಿತ್ತು.

ADVERTISEMENT

ಅರಸೀಕೆರೆ ಠಾಣೆ ಪೊಲೀಸರು, ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.