
ಪ್ರಜಾವಾಣಿ ವಾರ್ತೆ
ತೋವಿನಕೆರೆ: ಸಿದ್ಧರಬೆಟ್ಟದ ತುಂಬಾಡಿ ರಸ್ತೆಯ ಅರಣ್ಯ ನರ್ಸರಿ ಹತ್ತಿರದ ರಸ್ತೆ ತಿರುವಿನಲ್ಲಿ ಬುಧವಾರ ರಾತ್ರಿ ದ್ವಿಚಕ್ರ ವಾಹನ ಅಪಘಾತವಾಗಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಸಿದ್ಧರಬೆಟ್ಟದಲ್ಲಿ ಮದುವೆಗೆ ಬಂದಿದ್ದ ಮೂವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಾನ್‌ಸ್ಟೆಬಲ್ ಮಹೇಶ್ ಹಾಗೂ ಚೆನ್ನಿಗಯ್ಯ ಮೃತಪಟ್ಟಿದ್ದಾರೆ. ಭರತ್ ಎಂಬುವರು ಗಾಯಗೊಂಡಿದ್ದು ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ಎಲ್ಲರೂ ಮಧುಗಿರಿ ತಾಲ್ಲೂಕಿನ ಗರಣಿ ಗ್ರಾಮದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.