ತುಮಕೂರಿನ ಕೆಎಸ್‍ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ‘ನಮ್ಮ ಗೂಡಿನಿಂದ ಗುರಿಯ ಬೆನ್ನತ್ತಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಸರವಾದಿ ಸಿ.ಯತಿರಾಜು, ಮಹಾವಿದ್ಯಾಲಯ ಪ್ರಾಂಶುಪಾಲ ಆರ್.ಹರೀಶ್, ಉಪನ್ಯಾಸಕರಾದ ಟಿ.ಪಿ.ಕುಮಾರಸ್ವಾಮಿ, ಪಿ.ರಾಮಕೃಷ್ಣಪ್ಪ, ಆರ್ಯನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ.ಆರ್.ಗೋಪಾಲ್ ಇತರರು ಭಾಗವಹಿಸಿದ್ದರು
ತುಮಕೂರು: ಪರೀಕ್ಷಾ ಕೇಂದ್ರಿತವಾದ ಇಂದಿನ ಶಿಕ್ಷಣ ವ್ಯವಸ್ಥೆ ತೊಲಗಬೇಕು ಎಂದು ಪರಿಸರವಾದಿ ಸಿ.ಯತಿರಾಜು ಅಭಿಪ್ರಾಯಪಟ್ಟರು.
ನಗರದ ಕೆಎಸ್‍ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ಗೂಡಿನಿಂದ ಗುರಿಯ ಬೆನ್ನತ್ತಿ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋವಿಡ್ ಸಮಯದಲ್ಲಿ ಮಕ್ಕಳ ಕಲಿಕೆಯಲ್ಲಿ ಬಹು ದೊಡ್ಡ ಹಿನ್ನಡೆಯಾಗಿದೆ. ಆನ್‍ಲೈನ್ ಶಿಕ್ಷಣದ ವ್ಯಾಮೋಹ ಹೆಚ್ಚಾಯಿತು. ಭಾಷೆ ಕಲಿಕೆಯಲ್ಲಿನ ದೋಷಗಳನ್ನು ಗಮನಿಸಿ, ಸರಿಪಡಿಸುವವರೇ ಇಲ್ಲದಂತಾಗಿದ್ದಾರೆ. ಈ ಕಾಲವನ್ನು ಸತ್ಯೋತ್ತರ ಯುಗ ಎಂದು ಕರೆಯುತ್ತಾರೆ. ಸತ್ಯ ಬೇಕಾಗಿಲ್ಲ ಎಂಬುದೇ ಇದರ ಅರ್ಥ. ಸತ್ಯ, ಅಹಿಂಸೆಯನ್ನು ತನ್ನ ಉಸಿರಾಗಿಸಿಕೊಂಡಿದ್ದ ಮಹಾತ್ಮ ಗಾಂಧಿ ಜನಿಸಿದ ಈ ದೇಶದಲ್ಲಿ ಸತ್ಯಕ್ಕೆ ವಿರುದ್ಧವಾಗಿ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಎಸ್‍ಇಎಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ಹರೀಶ್, ಉಪನ್ಯಾಸಕರಾದ ಟಿ.ಪಿ.ಕುಮಾರಸ್ವಾಮಿ, ಪಿ.ರಾಮಕೃಷ್ಣಪ್ಪ, ಆರ್.ವೈಜಯಂತಿ, ಕಾಳಿದಾಸ ಪ್ರೌಢಶಾಲೆ ಉಪಪ್ರಾಂಶುಪಾಲ ಕೆ.ಚಂದ್ರಶೇಖರ್, ಆರ್ಯನ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಟಿ.ಆರ್.ಗೋಪಾಲ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.