ADVERTISEMENT

ತುಮಕೂರು: ಉತ್ತರ ಪ್ರದೇಶದ ಬಾಲಕಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 5:04 IST
Last Updated 8 ಜೂನ್ 2025, 5:04 IST
   

ತುಮಕೂರು: ಉತ್ತರ ಪ್ರದೇಶದ ಮಾಲ್ವಾ ಜಿಲ್ಲೆಯ 15 ವರ್ಷದ ಬಾಲಕಿಯನ್ನು ಕ್ಯಾತ್ಸಂದ್ರ ಠಾಣೆ ಪೊಲೀಸರು ನಗರದಲ್ಲಿ ಶನಿವಾರ ರಕ್ಷಿಸಿ, ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿದ್ದಾರೆ.

ಬಾಲಕಿ ಕಾಣೆಯಾದ ಬಗ್ಗೆ ಮಾಲ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಉತ್ತರ ಪ್ರದೇಶ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಾಲಕಿಯನ್ನು ರಕ್ಷಿಸಿ, ಆಕೆಯ ಜತೆಗಿದ್ದ ಶಾನವಾಜ್‌ (25) ಎಂಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

‘ಬಾಲಕಿ ಒಪ್ಪಿ ಯುವಕನ ಜತೆ ಬಂದಿದ್ದು, ಇಬ್ಬರನ್ನೂ ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಲಾಗುವುದು’ ಎಂದು ಕ್ಯಾತ್ಸಂದ್ರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.