ADVERTISEMENT

ಪಾವಗಡ | ವೈಕುಂಠ ಏಕಾದಶಿ: ಭಕ್ತರಿಂದ ಕಿಕ್ಕಿರಿದ ದೇಗುಲ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 6:27 IST
Last Updated 24 ಡಿಸೆಂಬರ್ 2023, 6:27 IST
ಪಾವಗಡ ತಾಲ್ಲೂಕು ಕೃಷ್ಣಾಪುರ ವೆಂಕಟೇಶ್ವರ ದೇಗುಲದಲ್ಲಿ ಪ್ರಯುಕ್ತ ವೈಕುಂಠ ದ್ವಾರ ಏರ್ಪಡಿಸಲಾಗಿತ್ತು
ಪಾವಗಡ ತಾಲ್ಲೂಕು ಕೃಷ್ಣಾಪುರ ವೆಂಕಟೇಶ್ವರ ದೇಗುಲದಲ್ಲಿ ಪ್ರಯುಕ್ತ ವೈಕುಂಠ ದ್ವಾರ ಏರ್ಪಡಿಸಲಾಗಿತ್ತು   

ಪಾವಗಡ: ಪಟ್ಟಣದ ಸಂತಾನ ವೇಣುಗೋಪಾಲಸ್ವಾಮಿ, ಕೃಷ್ಣಾಪುರದ ವೆಂಕಟೇಶ್ವರ ದೇಗುಲ ಸೇರಿದಂತೆ ವಿವಿಧೆಡೆ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷಪೂಜೆ ನಡೆಯಿತು.

ಸಂತಾನ ವೇಣುಗೋಪಾಲ ದೇಗುಲದಲ್ಲಿ ವೈಕುಂಠದ್ವಾರ ದರ್ಶನ ಏರ್ಪಡಿಸಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಕೃಷ್ಣಾಪುರದ ವೆಂಕಟೇಶ್ವರ ದೇಗುಲದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ ಆರಂಭಿಸಲಾಯಿತು. ಅಭಿಷೇಕ, ಕುಂಕುಮಾರ್ಚನೆ, ಉತ್ಸವ, ಅಲಂಕಾರ ನಡೆಯಿತು.

ADVERTISEMENT

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ದೇಗುಲಗಳು ಭಕ್ತರಿಂದ ಕಿಕ್ಕಿರಿದಿತ್ತು. ದೇಗುಲಗಳನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.

ಪಾವಗಡ ತಾಲ್ಲೂಕು ಕೃಷ್ಣಾಪುರ ವೆಂಕಟೇಶ್ವರ ಸ್ವಾಮಿ ಮೂಲ ವಿಗ್ರಹಕ್ಕೆ ಶನಿವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.

ಪಟ್ಟಣದ ಶನೈಶ್ಚರ ದೇಗುಲಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.