ADVERTISEMENT

ನಾಗರಿಕ ಬಂದೂಕು ತರಬೇತಿ ಸಮಾರೋ‍ಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:45 IST
Last Updated 13 ಅಕ್ಟೋಬರ್ 2018, 12:45 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ತಿಪಟೂರಿನ ಶಮಂತಕುಮಾರ್‌ಗೆ ಬಹುಮಾನ ವಿತರಣೆ ಮಾಡಿದರು. ಮಂಜುನಾಥ್, ಪ್ರಶಾಂತ್ ಇದ್ದರು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ತಿಪಟೂರಿನ ಶಮಂತಕುಮಾರ್‌ಗೆ ಬಹುಮಾನ ವಿತರಣೆ ಮಾಡಿದರು. ಮಂಜುನಾಥ್, ಪ್ರಶಾಂತ್ ಇದ್ದರು   

ತುಮಕೂರು: ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 55ನೇ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಡಾ.ದಿವ್ಯಾ ಗೋಪಿನಾಥ್ ಅವರು ತರಬೇತಿಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ತಿಪಟೂರಿನ ಶಮಂತ್‌ಕುಮಾರ್‌ಗೆ ಬಹುಮಾನ ವಿತರಿಸಿದರು.

ನಾಗರಿಕ ಬಂದೂಕುಗಳನ್ನು ಯಾವ ಯಾವ ಸಮಯದಲ್ಲಿ ಬಳಕೆ ಮಾಡಬೇಕು. ಬಂದೂಕು ತರಬೇತಿ ಪಡೆದವರು ಪೊಲೀಸ್ ಇಲಾಖೆಯೊಂದಿಗೆ ಹೇಗೆ ಇರಬೇಕು ಎಂಬುದರ ಬಗ್ಗೆ ಎಸ್ಪಿ ಮನವರಿಕೆ ಮಾಡಿಕೊಟ್ಟರು.

ADVERTISEMENT

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್‌ಪಿ ಮಂಜುನಾಥ್, ಆರ್‌ಪಿಐ ಪ್ರಶಾಂತ್, ಶಸ್ತ್ರಾಗಾರದ ನಾಗರಾಜ್, ಕುಮಾರ್ ಇದ್ದರು.

13 ದಿನಗಳ ಕಾಲ ನಡೆದ ತರಬೇತಿಯಲ್ಲಿ 90 ನಾಗರಿಕರು ಭಾಗವಹಿಸಿದ್ದರು. ಆಯುಧಗಳನ್ನು ಹೇಗೆ ಉಪಯೋಗಿಸಬೇಕು, ಗುರಿ ಅಭ್ಯಾಸ, ಆಯುಧಗಳ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ತಿಳಿಸಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.