ADVERTISEMENT

ಫೆ. 8, 9ಕ್ಕೆ ಮಧುಗಿರಿ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:06 IST
Last Updated 27 ಜನವರಿ 2026, 8:06 IST
ಮಧುಗಿರಿಯಲ್ಲಿ ಸೋಮವಾರ ರಾಜನಹಳ್ಳಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು
ಮಧುಗಿರಿಯಲ್ಲಿ ಸೋಮವಾರ ರಾಜನಹಳ್ಳಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು   

ಮಧುಗಿರಿ: ಫೆಬ್ರುವರಿ 8 ಮತ್ತು 9ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಸ್ ಆರ್ ಶಾಂತಲಾ ರಾಜಣ್ಣ ತಿಳಿಸಿದರು.

ಸೋಮವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಮಠದ ಪುಣ್ಯನಂದ ಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜಾತ್ರೆ ಆಚರಿಸಲಾಗುವುದು. ಮೀಸಲಾತಿ ಹೆಚ್ಚಳದ ವಿಚಾರದಲ್ಲಿ ಸ್ವಾಮೀಜಿ ಪಾತ್ರ ಹೆಚ್ಚಿದ್ದು, ಅವರ ಹೋರಾಟದ ಫಲವಾಗಿ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ನಿಗದಿಯಾಗಿದೆ. ನಾಯಕ ಸಮುದಾಯದವರು ಸಂಘಟಿತರಾಗಬೇಕು. ಜಾತ್ರೆಗೆ ತಾಲ್ಲೂಕಿನಿಂದ ಹೋಗಿ ಬರಲು ಹೋಬಳಿಗೊಂದರಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ತಾಲ್ಲೂಕು ಅಧ್ಯಕ್ಷ ಜಿ.ಎಸ್.ಜಗದೀಶ್ ಕುಮಾರ್, ಡಿ.ಎಸ್. ಮುನೀಂದ್ರಕುಮಾರ್, ಶಂಕರನಾರಾಯಣ, ಅಶ್ವತ್ಥಪ್ಪ, ಚಿರಂಜೀವಿ, ಮೂರ್ತಿ, ಗಂಗರಾಜು, ಶಿವಪ್ಪ, ರಮೇಶ್, ಪ್ರೂಟ್ ಕಿಟ್ಟಿ, ಲೋಕೇಶ್, ನಾಗೇಶ್, ಮೇಕೆಬಂಡೆ ರಂಗನಾಥ್, ಚಂದ್ರಮ್ಮ, ನಿರ್ಮಲ, ಸ್ನೇಹ, ಮುದ್ದಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.