ತುಮಕೂರು: ಇಳಿಕೆ ಕಂಡಿದ್ದ ತರಕಾರಿ, ಸೊಪ್ಪಿನ ದರ ಈಗ ಏರಿಕೆಯತ್ತ ಮುಖ ಮಾಡಿದೆ. ಹಣ್ಣುಗಳು ಮತ್ತಷ್ಟು ದುಬಾರಿಯಾಗುತ್ತಲೇ ಸಾಗಿದ್ದು, ಕೋಳಿ ಮಾಂಸ, ಮೀನಿನ ಬೆಲೆಯೂ ಹೆಚ್ಚಳವಾಗಿದೆ.
ಕಳೆದ ವಾರ ತಗ್ಗಿದ್ದ ತರಕಾರಿ ಬೆಲೆ ಈ ವಾರ ಏರಿಕೆ ದಾಖಲಿಸಿದೆ. ಬಹುತೇಕ ತರಕಾರಿ ದರ ಹೆಚ್ಚಳವಾಗಿದೆ. ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ತಾಪಮಾನದ ಬಿಸಿ ತಟ್ಟುತ್ತಲೇ ಇದೆ. ವಾತಾವರಣದಲ್ಲಿನ ವೈಪರೀತ್ಯದಿಂದಾಗಿ ತರಕಾರಿ ಬೆಳೆ ಕಾಪಾಡಿಕೊಳ್ಳುವುದು ರೈತರಿಗೆ ಕಷ್ಟಕರವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಹೂ ಕೋಸು ಒಮ್ಮೆಲೆ ದುಪ್ಪಟ್ಟಾಗಿದ್ದು, ಮಧ್ಯಮ ಗಾತ್ರದ ಒಂದು ₹50ಕ್ಕೆ ತಲುಪಿದೆ. ಬೀನ್ಸ್ ಕೆ.ಜಿ ₹50–60ಕ್ಕೆ ಮುಟ್ಟಿದ್ದು, ಚಿಲ್ಲರೆಯಾಗಿ ಇನ್ನೂ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕ್ಯಾರೇಟ್, ಬೀಟ್ರೂಟ್, ಗಡ್ಡೆಕೋಸು, ಮೂಲಂಗಿ, ತೊಂಡೆಕಾಯಿ ಏರಿಕೆಯಾಗಿದ್ದು, ನಗ್ಗೆಕಾಯಿ ದುಪ್ಪಟ್ಟಾಗಿದೆ. ಬೆಂಡೆಕಾಯಿ, ಎಲೆಕೋಸು, ಹಾಗಲಕಾಯಿ ಅಲ್ಪ ಇಳಿದಿದೆ. ಬೆಳ್ಳುಳ್ಳಿ ಮತ್ತಷ್ಟು ಇಳಿಕೆಯಾಗಿದ್ದು, ಕೆ.ಜಿ ₹80–100ಕ್ಕೆ ಕುಸಿದಿದೆ. ಶುಂಠಿ ಏರಿಕೆಯತ್ತ ಮುಖ ಮಾಡಿದೆ.
ಸೊಪ್ಪು ಏರಿಕೆ: ಸೊಪ್ಪು ಸಹ ತರಕಾರಿ ದಾರಿಯನ್ನೇ ಹಿಡಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಸೊಪ್ಪು ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಏರಿಕೆಯಾಗಿದೆ.
ಹಣ್ಣು ದುಬಾರಿ: ಇಳಿಕೆಯಾಗಿದ್ದ ಪಪ್ಪಾಯ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹50ಕ್ಕೆ ಮುಟ್ಟಿದೆ. ಕಲ್ಲಂಗಡಿ, ದ್ರಾಕ್ಷಿ, ಸೇಬು ಹೆಚ್ಚಳವಾಗಿದೆ. ದಾಳಿಂಬೆ ಕೆ.ಜಿಗೆ ₹30 ಕಡಿಮೆಯಾಗಿದೆ. ಡ್ರ್ಯಾಗನ್ ಫ್ರೂಟ್ ಒಮ್ಮೆಲೆ ಅರ್ಧದಷ್ಟು ಕುಸಿದಿದೆ. ಮಾವಿನ ಹಣ್ಣು ಮಾರುಕಟ್ಟೆಗೆ ಕಾಲಿಟ್ಟಿದ್ದು, ಸೇಂದೂರ ಕೆ.ಜಿ ₹30, ತೋತಾಪುರಿ ಕೆ.ಜಿ ₹80ಕ್ಕೆ ಮಾರಾಟವಾಗುತ್ತಿದೆ.
ಅಡುಗೆ ಎಣ್ಣೆ: ಅಡುಗೆ ಎಣ್ಣೆ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹146–148, ಪಾಮಾಯಿಲ್ ಕೆ.ಜಿ ₹125–126, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಸಿಗುತ್ತಿದೆ.
ಬೇಳೆ– ಧಾನ್ಯ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ತುಸು ಸುಧಾರಿಸಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಅಲಸಂದೆ, ಅವರೆಕಾಳು, ಹುರುಳಿಕಾಳು ಅಲ್ಪ ಹೆಚ್ಚಳವಾಗಿದೆ.
ಮಸಾಲೆ ಪದಾರ್ಥ: ಕೆಲವು ಮಸಾಲೆ ಪದಾರ್ಥಗಳ ಬೆಲೆ ಈ ವಾರವೂ ಏರಿಕೆಯಾಗಿದೆ. ಒಣ ಹಣ್ಣುಗಳು ಮತ್ತಷ್ಟು ದುಬಾರಿಯಾಗಿದ್ದು, ಒಣ ದ್ರಾಕ್ಷಿ ಮತ್ತೆ ಗಗನಮುಖಿಯಾಗಿದೆ.
ಧನ್ಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹150–160, ಹುಣಸೆಹಣ್ಣು ₹150–160, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹800–850, ಜೀರಿಗೆ ಕೆ.ಜಿ ₹280–300, ಚಕ್ಕೆ ಕೆ.ಜಿ ₹260–280, ಲವಂಗ ಕೆ.ಜಿ ₹850–880, ಗುಣಮಟ್ಟದ ಗಸಗಸೆ ಕೆ.ಜಿ ₹1,300–1,350, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹820–850, ಗೋಡಂಬಿ ಕೆ.ಜಿ ₹850–900, ಒಣ ದ್ರಾಕ್ಷಿ ಕೆ.ಜಿ ₹330–360ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ಕೋಳಿ ಹೆಚ್ಚಳ: ಇಳಿಕೆ ಕಂಡಿದ್ದ ಕೋಳಿ ಮಾಂಸದ ದರ ಒಮ್ಮೆಲೆ ಹೆಚ್ಚಳವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹115ಕ್ಕೆ ಏರಿಕೆಯಾಗಿದೆ.
ಮೀನು: ಮೀನಿನ ಧಾರಣೆಯೂ ದುಬಾರಿಯಾಗಿದ್ದು, ಅಂಜಲ್ ಒಮ್ಮೆಲೆ ಕೆ.ಜಿಗೆ ₹400 ಏರಿಕೆಯಾಗಿದೆ. ಬಂಗುಡೆ ಕೆ.ಜಿ ₹350, ಬೂತಾಯಿ ಕೆ.ಜಿ ₹190, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹1,440, ಸೀಗಡಿ ಕೆ.ಜಿ ₹510–720, ಏಡಿ ಕೆ.ಜಿ ₹540ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.
ಪಟ್ಟಿ.....
ಹಣ್ಣು (ಬೆಲೆ ಕೆ.ಜಿ ₹)
ಸೇಬು;220–350
ದಾಳಿಂಬೆ;220
ಮೂಸಂಬಿ;80
ಕಿತ್ತಳೆ;150
ಸಪೋಟ;100
ಏಲಕ್ಕಿ ಬಾಳೆ;74
ಪಚ್ಚಬಾಳೆ;36
ಸೀಬೆ;130
ಪೈನಾಪಲ್;60
ಪಪ್ಪಾಯ;50
ಕರಬೂಜ;50
ಕಲ್ಲಂಗಡಿ;25
ದ್ರಾಕ್ಷಿ;120
ದ್ರಾಕ್ಷಿ(ಕಪ್ಪು);250
ಡ್ರ್ಯಾಗನ್ ಫ್ರೂಟ್;120
ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)
ತೊಗರಿ ಬೇಳೆ;105–120
ಕಡಲೆ ಬೇಳೆ;80–85
ಉದ್ದಿನ ಬೇಳೆ;120–125
ಹೆಸರು ಬೇಳೆ;105–110
ಕಡಲೆಕಾಳು;70–75
ಹೆಸರು ಕಾಳು;105–115
ಅಲಸಂದೆ;85–90
ಅವರೆಕಾಳು;100–110
ಹುರುಳಿಕಾಳು;50–55
ಹುರಿಗಡಲೆ;90–95
ಬಟಾಣಿ;115–120
ಕಡಲೆ ಬೀಜ;110–120
ಗೋಧಿ;40–45
ಸಕ್ಕರೆ;43–44
**
ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)
ಬೀನ್ಸ್;50–60
ಕ್ಯಾರೇಟ್;30–40
ಬೀಟ್ರೂಟ್;25–30
ಈರುಳ್ಳಿ;20–25
ಬೆಳ್ಳುಳ್ಳಿ;80–100
ಟೊಮೆಟೊ;10–15
ಆಲೂಗಡ್ಡೆ;35–40
ಗಡ್ಡೆಕೋಸು;30–40
ಮೂಲಂಗಿ;25–30
ಬೆಂಡೆಕಾಯಿ;15–20
ಬದನೆಕಾಯಿ;15–20
ಎಲೆಕೋಸು;10–15
ಹೂಕೋಸು(1ಕ್ಕೆ);50
ತೊಂಡೆಕಾಯಿ;30–40
ಹಾಗಲಕಾಯಿ;30–35
ನುಗ್ಗೆಕಾಯಿ;50–60
ಮೆಣಸಿನಕಾಯಿ;40–50
ಕ್ಯಾಪ್ಸಿಕಂ;40–50
ಶುಂಠಿ;50–60
ಸೌತೆಕಾಯಿ 1ಕ್ಕೆ;5–6
ನಿಂಬೆಹಣ್ಣು 1ಕ್ಕೆ;5–6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.