ಕೊರಟಗೆರೆ: ಇತ್ತೀಚೆಗೆ ನಡೆದ ಭಾರತ, ಪಾಕಿಸ್ತಾನ ಯುದ್ಧ ಬೆಳವಣಿಗೆಗೆ ಸಂಬಂಧಿಸಿದಂತೆ ದೇಶದ ಸೈನಿಕರು ಸೂಕ್ತ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಯಾರೂ ಪ್ರಚೋದನೆಗೆ ಒಳಗಾಗದೆ ಎಚ್ಚರವಹಿಸಬೇಕು ಎಂದು ಪಿಎಸ್ಐ ವೈ.ಜಿ.ತೀರ್ಥೇಶ್ ತಿಳಿಸಿದರು.
ಪಟ್ಟಣದಲ್ಲಿ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಜೆಗಳಿಗೆ ಯಾವುದೇ ತೊಂದರೆಯಾಗದಂತೆ ಈಗಾಗಲೇ ಸೈನಿಕರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅನೇಕ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ವಹಿಸಲಾಗುವುದು. ಆದರೆ ಇಂತಹ ಪ್ರಚೋದನಕಾರಿ ಹಾಗೂ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ಭಯ ಪಡದೆ ಸದಾ ಎಚ್ಚರದಿಂದ ಇರಬೇಕು ಎಂದು ಅರಿವು ಮೂಡಿಸಿದರು.
ಸಿಪಿಐ ಆರ್.ಪಿ. ಅನಿಲ್, ಪಿಎಸ್ಐ ಬಸವರಾಜು, ಎಎಸ್ಐ ನಾಗರಾಜು, ಸಿಬ್ಬಂದಿ ಪ್ರದೀಪ್, ಚೆನ್ನಮಲ್ಲಿಕಾರ್ಜುನ, ದೊಡ್ಡಲಿಂಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.