ADVERTISEMENT

ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:32 IST
Last Updated 21 ಫೆಬ್ರುವರಿ 2026, 7:32 IST
   

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿಯ ಕೆಇಬಿ ಕಚೇರಿ ಮುಂಭಾಗ ಶನಿವಾರ ಕಾರು ಡಿಕ್ಕಿಯಾಗಿ ಲತಾ(45) ಎಂಬುವರು ಮೃತಪಟ್ಟಿದ್ದಾರೆ.

ಮಿಡಿಗೇಶಿಯ ಮಾರುತಿನಗರದ ಲತಾ ಮನೆಗೆ ಪಡಿತರ ತರಲು ರಸ್ತೆ ಬದಿ ಹೋಗುವಾಗ ಮಧುಗಿರಿ ಕಡೆಯಿಂದ ಮಡಕಶಿರಾಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಧುಗಿರಿ ಸಿಪಿಐ ಹನುಮಂತರಾಯಪ್ಪ, ಮಿಡಿಗೇಶಿ ಠಾಣೆ ಪಿಎಸ್‌ಐ ಪಿ‌‌.ಎಲ್‌.ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.