ಕೊರಟಗೆರೆ: ಇಲ್ಲಿನ ಮೂಡ್ಲಪಣ್ಣೆ ಶಿರಡಿಸಾಯಿಬಾಬ ಮಂದಿರದಲ್ಲಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪಟ್ಟಣದ ಶಿರಡಿ ಸಾಯಿಬಾಬ ಮಂದಿರದ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮೆ ಅಂಗವಾಗಿ ಮುಂಜಾನೆ 5 ಗಂಟೆಯಿಂದಲೇ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. 5 ಗಂಟೆಗೆ ಕ್ಷೀರಾಭಿಷೇಕ, ಕಾಕಡ ಆರತಿ ಉತ್ಸವ, ದೇವಲಯದ ಗೋಪುರಕ್ಕೆ ನೂತನ ಕಳಷ ಸ್ಥಾಪನೆ ಮಾಡಲಾಯಿತು.
ಸುಪ್ರಭಾತ ಸೇವೆ, ಮೂಲ ದೇವರಿಗೆ ಅಭಿಷೇಕ, ವಿಷ್ಣು ಸಹಸ್ರನಾಮ ಪರಾಯಣ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸಂಜೆ 6-30ರಿಂದ 9-30ರ ವರೆಗೆ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದ ಪ್ರತಾಪ್ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ ಹಾಗೂ ವಾಸವಿ ಮಹಿಳಾ ಮಂಡಲಿ ಮಹಿಳೆಯರಿಂದ ಭಕ್ತಿಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿರಡಿ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸುದಾಮಣಿ, ಶಂಕರನಾರಾಯಣ ಶ್ರೇಷ್ಟಿ, ಕಾರ್ಯದರ್ಶಿ ಆರ್.ಮಲ್ಲಿಕಾರ್ಜುನ್, ಖಜಾಂಚಿ ಪ್ರಕಾಶ್ ಕುಮಾರ್, ನಿರ್ದೇಶಕರಾದ ಬದ್ರಿಪ್ರಸಾದ್, ನವೀನ್ ಕುಮಾರ್, ರತ್ನಾಕರ್, ಅರ್ಚಕ ಸಂಜಯ್ ಮಿಶ್ರ, ಹರ್ಷ, ಪುಟ್ಟರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.