ADVERTISEMENT

ಕುಣಿಗಲ್ | ₹25 ಲಕ್ಷಕ್ಕೆ ಬೇಡಿಕೆ: ಯೂಟೂಬರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 7:07 IST
Last Updated 22 ಆಗಸ್ಟ್ 2025, 7:07 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕುಣಿಗಲ್: ತಾಲ್ಲೂಕಿನ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥಸ್ವಾಮಿಗೆ ಬೆದರಿಕೆ ಹಾಕಿ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ತುಮಕೂರಿನ ಯೂಟೂಬ್‌ ಚಾಲನ್‌ವೊಂದರ ಸುಧೀಂದ್ರ ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ADVERTISEMENT

ಸುಧೀಂದ್ರ ಜನವರಿ 21 ರಿಂದಲೂ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಜೂನ್ 28ರಂದು ಮಠದ ಸಿಬ್ಬಂದಿ ಅಭಿಲಾಷ್, ಸುರೇಶ್ ಮತ್ತು ಭಕ್ತರಾದ ಬೀಚನಹಳ್ಳಿ ಕರಿಗೌಡ ಅವರನ್ನು ಸಂಪರ್ಕಿಸಿ ‘ಮಠಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೊಂದಿದ್ದು, ಅವುಗಳನ್ನು ಪ್ರಕಟಿಸಿದರೆ ಮಠದ ಹೆಸರು ಹಾಳಾಗುತ್ತದೆ. ಇದನ್ನು ಪ್ರಸಾರ ಮಾಡದಿರಲು ₹25 ಲಕ್ಷ ನೀಡಿ’ ಎಂದು ಬೆದರಿಕೆ ಹಾಕಿದ್ದ ಎಂದು ಸ್ವಾಮೀಜಿ ದೂರಿದ್ದಾರೆ.

‘ಹಣ ನೀಡದ ಕಾರಣ ಜುಲೈ 10ರಂದು ಸುಧೀಂದ್ರ ತನ್ನ ಯೂಟೂಬ್ ಚಾನಲ್‌ನಲ್ಲಿ ‘ಪುಣ್ಯ ಕ್ಷೇತ್ರ- ಕ್ಷೇತ್ರ ಪಾಪಿ ಬಾಲ ಮೌಢ್ಯ ಲೀಲೆ– ಭಾಗ 1’ ನಂತರ 17ರಂದು ‘ಭಾಗ– 2’ ಪ್ರಸಾರ ಮಾಡಿದ್ದಾನೆ. ಇವೆಲ್ಲವೂ ಕಲ್ಪಿತ ಮತ್ತು ಆಧಾರ ರಹಿತ ಆರೋಪ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಾಲಮಂಜುನಾಥ ಸ್ವಾಮೀಜಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.