ADVERTISEMENT

ಅಕ್ರಮ ಮರ ಸಾಗಣೆ: ವಾಹನ ವಶ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 8:50 IST
Last Updated 19 ಏಪ್ರಿಲ್ 2018, 8:50 IST
ಅಕ್ರಮ ಮರಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಅಕ್ರಮ ಮರಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು   

ಸಿದ್ದಾಪುರ: ಅಕ್ರಮವಾಗಿ ಮರ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡದುಕೊಂಡ ಘಟನೆ ಸೋಮವಾರ ರಾತ್ರಿ ಗೋಳಿಯಂಗಡಿ ಶಿರೂರು ರಾಜ್ಯ ಹೆದ್ದಾರಿ ಕಾನಾಡಿ ಬಳಿ ನಡೆದಿದೆ.

ಅರಣ್ಯಾಧಿಕಾರಿಗಳು ಗಸ್ತು ತಿರುಗುವ ವೇಳೆ ಅನುಮಾನಗೊಂಡು ಕೆಎ. 16, ಬಿ. 2212 ಇಸರ್‌ ವಾಹನ ತಡೆದು ನಿಲ್ಲಿಸಿದ್ದಾಗ, ಅಕ್ರಮವಾಗಿ ಮರ ಸಾಗಣೆ ಮಾಡುತ್ತಿರುವುದು  ಕಂಡು ಬಂದಿದೆ. ಮಾವು ಸೇರಿದಂತೆ ಇತರ ಜಾತಿಯ ಮರದ ದಿಮ್ಮಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ₹ 4 ಲಕ್ಷ ಎಂದು ಅಂದಾಜಿಸಲಾಗಿದೆ.

ವಾಹನ ಚಾಲಕ ಸರಸಪ್ಪನನ್ನು ವಶಕ್ಕೆ ಪಡೆಯಲಾಗಿದೆ. ಹೆಂಗವಳ್ಳಿ ವಸಂತ ಹೆಗ್ಡೆ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಹೆಂಗವಳ್ಳಿಯಲ್ಲಿ ಮರ ಕಡಿದು ಉಡುಪಿಗೆ ಸಾಗಿಸುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ. ಗೋಪಾಲ, ಉಪ ವಲಯಾರಣ್ಯಾಧಿಕಾರಿ ಹರೀಶ್ ಕೆ, ವೀರಣ್ಣ ಮಾಯಾಚಾರ್, ಸಂತೋಷ ದೇವಾಡಿಗ, ವನಪಾಲಕ ಸಂತೋಷ ಜೋಗಿ ಹಾಗೂ ಪ್ರವೀಣ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.