ADVERTISEMENT

ಎ.ಎಸ್‌.ಎನ್‌ ಹೆಬ್ಬಾರ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 11:50 IST
Last Updated 6 ಡಿಸೆಂಬರ್ 2013, 11:50 IST

ಕುಂದಾಪುರ: 50 ವರ್ಷದ ವಕೀಲಿ ವೃತ್ತಿ ಪೂರೈಸಿದ ಹಿರಿಯ ವಕೀಲ ಹಾಗೂ ಸಾಹಿತಿ ಎ.ಎಸ್‌.ಎನ್‌ ಹೆಬ್ಬಾರ್‌ ಅವರಿಗೆ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅವರು ಶಿಷ್ಯ ವೃಂದ  ಸಾರ್ವಜನಿಕ ಸನ್ಮಾನ ನೀಡಿತು.

ಅಂಕಣಕಾರ ಚರ್ಕವರ್ತಿ ಸೂಲಿಬೆಲೆ ಮಾತನಾಡಿದರು. 3180 ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ.ಎಚ್.ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು.

3ನೇ ಹಣಕಾಸು ವರದಿ ಅನುಷ್ಠಾನ ಕಾರ್ಯ ಪಡೆಯ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ರೇವಣ್‌ಕರ್, 3180  ರೋಟರಿ ಜಿಲ್ಲೆಯ ಚುನಾಯಿತ ಗವರ್ನರ್ ಡಾ.ಭರತೇಶ್. ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಗಳಾಗಿದ್ದರು.

ಹಂಗಾರಕಟ್ಟೆ ಕಲಾಕೇಂದ್ರದ ಉಪಾ ಧ್ಯಕ್ಷ ಎ.ವೈಕುಂಠ ಹೆಬ್ಬಾರ್, ಕುಂದಾ ಪುರ ವಕೀಲರ ಸಂಘದ ಉಪಾಧ್ಯಕ್ಷ ಪಿ.ಶ್ರೀಧರ ರಾವ್, ಉಡುಪಿ ವಕೀಲರ ಸಮಘದ ಉಪಾಧ್ಯಕ್ಷ ಗಣೇಶ್ ಮಟ್ಟು, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ  ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಕೆ.ಆರ್.ಪಂಡಿತ್, ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ನಾಯಕ್, ಕುಮಟಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ.ನಾಯಕ್‌, ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಶೋಭಾ ನಾಯ್ಕ, ಕುಂದಾಪುರ ರೋಟರಿ ಕ್ಲಬ್‌ ಅಧ್ಯಕ್ಷ  ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ರೋಟರಿ ದಕ್ಷಿಣದ ಅಧ್ಯಕ್ಷ  ಜಿ.ಶ್ರೀಧರ ಶೆಟ್ಟಿ, ರೋಟರಿ ಮಿಡ್‌ಟೌನ್ ಅಧ್ಯಕ್ಷ  ರಂಜಿತ್ ಕುಮಾರ್ ಶೆಟ್ಟಿ, ರೋಟರಿ ಸನ್‌ರೈಸ್ ಅಧ್ಯಕ್ಷ ಬಿ.ಎಂ. ಚಂದ್ರಶೇಖರ್, ಜೇಸಿ ಅಧ್ಯಕ್ಷ ಪ್ರಕಾಶ್‌ ಎಂ., ಸಿಟಿ ಜೇಸಿ ಅಧ್ಯಕ್ಷ ನಾಗೇಂದ್ರ ಪೈ ಇತರರು ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.