ADVERTISEMENT

ಕರಾವಳಿಗರು ಹಸಿರು ಪ್ರೇಮಿಗಳು

ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:51 IST
Last Updated 15 ಜೂನ್ 2018, 13:51 IST
ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಪರಿಸರ ದಿನಾಚರಣೆ ಉದ್ಘಾಟಿಸಿದರು.    ಪ್ರಜಾವಾಣಿ ಚಿತ್ರ
ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಪರಿಸರ ದಿನಾಚರಣೆ ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ಪರಿಸರ ಮಾಲಿನ್ಯ ಜೀವ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಯುವ ಜನತೆ ಸಸಿ ನೆಡುವ ಉದ್ದೇಶ ಅರಿತು ಪರಿಸರ ಕಾಳಜಿಗೆ ಮುಂದಾದರೆ, ಮುಂದಿನ ಜನಾಂಗಕ್ಕೆ ಬದುಕಲು ಭೂಮಿಯನ್ನು ನೀಡಿದಂತಾಗುತ್ತದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ತಿಳಿಸಿದರು.

ಅರಣ್ಯ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ಗುರುವಾರ ಧರ್ಮಸ್ಥಳ ಮಂಜುನಾ ಥೇಶ್ವರ ಆಯುರ್ವೇದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಇತರೆಡೆಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಹಸಿರು ಹೆಚ್ಚಾಗಿ ಕಾಣಸಿಗುತ್ತದೆ. ಸರಿಯಾದ ಸಮಯದಲ್ಲಿ ಮಳೆಯಾಗುತ್ತಿರುವುದರಿಂದ ಸಸ್ಯರಾಶಿ ಬೆಳೆಸಲು ಸಾಧ್ಯವಾಗುತ್ತಿದೆ. ಆದರೆ, ಇತರೆ ಜಿಲ್ಲೆಗಳಲ್ಲಿ ಜನರು ನೀರಿಗಾಗಿ ಪಡುತ್ತಿರುವ ಬವಣೆ ಹೇಳತೀರದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾ ಣದಲ್ಲಿ ಸಮಯವನ್ನು ವ್ಯರ್ಥ ಮಾಡದೆ ಪರಿಸರ, ಪ್ರಕೃತಿಯೆಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದರು.

ADVERTISEMENT

ಆಯುರ್ವೇದ ಶಾಸ್ತ್ರಕ್ಕೂ ಮರಗ ಳಿಗೂ ಅವಿನಾಭಾವ ಸಂಬಂಧ. ಪ್ರಕೃತಿ ಇದ್ದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ. ಆದರೆ, ಇಂದು ವಿವಿಧ ಕಾರಣಗಳಿಂದ ಜೀವಜಲ ಬತ್ತಿದೆ. ಬರಗಾಲ, ಬರಪೀಡಿತ ಪ್ರದೇಶಗಳು ಕಾಣಸಿಗುತ್ತಿದೆ. ಜೀವಕುಲ ಸಂರಕ್ಷಣೆಗೆ ಎಲ್ಲರೂ ಮನೆ ಗೊಂದರಂತೆ ಮರ ನೆಡಿ ಎಂದು ಕರೆನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಮಾತನಾಡಿ, ‘ಕಾನೂನಿಗೂ ಅರಣ್ಯಕ್ಕೂ ಅನ್ಯೋನ್ಯ ಸಂಬಂಧವಿದೆ. ಇಂದು ರಕ್ಷಿತಾರಣ್ಯಗಳ ಉಳಿವಿಗೆ ಸುಪ್ರೀಂ ಕೋರ್ಟ್ ತೀರ್ಪು ಕಾರಣವಾಗಿದೆ. ನ್ಯಾಯಾಲಯದ ಹಸಿರು ಪರವಾದ ಆದೇಶದಿಂದ ಕಾಡುಗಳು ಇಂದಿಗೂ ಅತಿಕ್ರಮಣದಿಂದ ಮುಕ್ತವಾಗಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ಮಾತನಾಡಿ, ಆಯುರ್ವೇದ ಚಿಕಿತ್ಸೆಗೆ ಔಷಧ ವನಗಳು, ಮರಗಳ ಅಗತ್ಯವನ್ನು ವಿವರಿಸಿದರು. ಹಸಿರಿನಿಂದ ಕಂಗೊಳಿಸುತ್ತಿರುವ ಕಾಲೇಜಿನ ವಾತಾವರಣ ಸಂಸ್ಥೆಯ ಹೆಮ್ಮೆ ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿ ಕಾರಿ ಡಾ.ಸುಚೇತ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಪ್ರಾಸ್ತಾವಿಕ ಮಾತನಾಡಿದರು. ಡಾ.ಹರ್ಷಿತಾ ಹಾಗೂ ಡಾ. ಯೋಗೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್‌. ನಾಗರಾಜ್ ವಂದಿಸಿದರು.

ವಿವಿಧ ವಿಭಾಗಗಳ ತಜ್ಞರಿಗೆ ಸಸಿಗಳನ್ನು ವಿತರಿಸಲಾಯಿತು. ಡಾ. ಮಮತಾ, ಡಾ. ವೀರ ಕುಮಾರ್, ಡಾ. ಶ್ರೀಕಾಂತ್, ಡಾ. ನಿರಂಜನ್, ಡಾ. ಸುಮಾ ಮಲ್ಯಾ, ಡಾ. ಲಿಖಿತಾ, ಡಾ. ಅಮಲಾ ಜ್ಯೋತಿ, ಡಾ.ಪದ್ಮಕಿರಣ್, ಡಾ. ನಿವೇದಿತಾ, ಡಾ.ಮಹಮ್ಮದ್ ಫೈಸಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.