ADVERTISEMENT

ಕೆಲಸ ಕಡಿತ: ಬೀಡಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:08 IST
Last Updated 13 ಡಿಸೆಂಬರ್ 2013, 9:08 IST

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾರತ್ ಬೀಡಿ ಸಂಸ್ಥೆ ಬಡ ಕಾರ್ಮಿಕರ ಕೆಲಸ ಕಡಿತಗೊಳಿಸಿ ರುವುದನ್ನು ವಿರೋಧಿಸಿ ಉಡುಪಿ ತಾಲ್ಲೂಕು ಬೀಡಿ ಲೇಬರ್ ಯೂನಿ ಯನ್‌ ಸದಸ್ಯರು   ಉಡುಪಿ ಭಾರತ್ ಬಿಡಿ ಕಂಪೆನಿಯ ಡಿಪೊ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಡಿತಗೊಳಿಸಿದ ಪರಿಣಾಮ ಬೀಡಿ ಕೆಲಸವನ್ನೇ ಅವಲಂಬಿಸಿ ಬದು ಕುತ್ತಿರುವ ಸಾವಿರಾರು ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಸಂಸ್ಥೆಯೇ ಪರಿಹಾರ ಕಂಡುಹಿಡಿ ಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಸ್ಥೆಯ ವ್ಯವಸ್ಥಾಪಕರ ಮುಖಾಂತರ ಸಂಸ್ಥೆಯ ಮಾಲೀಕರಿಗೆ ಮನವಿ ಸಲ್ಲಿಸಲಾಯಿತು. ಎಸ್‌ಕೆ ಬೀಡಿ ವರ್ಕರ್ಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಂ ಬೇರಿಂಜ, ಲೇಬರ್ ಯೂನಿಯನ್‌ನ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್, ಉಪಾಧ್ಯಕ್ಷರಾದ ಬಿ. ಶೇಖರ್, ಆನಂದ ಪೂಜಾರಿ, ರಾಮಣ್ಣ ಮೂಲ್ಯ, ಸೋಮಪ್ಪ ಜತ್ತನ್‌, ಪ್ರಧಾನ ಕಾರ್ಯದರ್ಶಿ ಶಶಿಕಲಾ ಗಿರೀಶ್ ಮತ್ತಿತರರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.