ADVERTISEMENT

ಕೇಂದ್ರ ಹಸಿರು ಪೀಠ ಷರತ್ತುಬದ್ಧ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 7:45 IST
Last Updated 10 ಮಾರ್ಚ್ 2012, 7:45 IST

ಪಡುಬಿದ್ರಿ: ಉಡುಪಿ ಪವರ್ ಕಾರ್ಪೊರೇಶನ್ ಎಲ್ಲೂರು ಬಳಿ ಉತ್ಪಾದಿಸುವ ವಿದ್ಯುತ್ತನ್ನು ಹಾಸನದ ಕೇಂದ್ರೀಯ ಗ್ರಿಡ್‌ಗೆ ಜೋಡಿಸಲು ನಂದಿಕೂರಿನಿಂದ ಪಶ್ಚಿಮ ಘಟ್ಟದ ದಟ್ಟಾರಣ್ಯದ ಮೂಲಕ ಹಾಸನದ ಶಾಂತಿಗ್ರಾಮದವರೆಗೆ ಕೆಪಿಟಿಸಿಎಲ್ ಮೂಲಕ ಕಾರ್ಯಗತವಾಗುತ್ತಿರುವ ವಿದ್ಯುತ್ ಸಾಗಾಟ ಲೈನ್ ನಿರ್ಮಿಸಲು ಕೇಂದ್ರ ಹಸಿರು ಪೀಠ (ಗ್ರೀನ್ ಟ್ರಿಬ್ಯೂನಲ್) ಷರತ್ತುಬದ್ಧ ಒಪ್ಪಿಗೆ ನೀಡಿದೆ.

ಈ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರದ ಪರಿಸರ ಹಾಗೂ ಅರಣ್ಯ ಇಲಾಖೆ ಇದೇ 17ರಂದು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ, ರಾಜ್ಯ ಸರ್ಕಾರ ಹಾಗೂ ಕೆಪಿಟಿಸಿಎಲ್‌ಗಳನ್ನು ಪ್ರತಿವಾದಿಯಾಗಿಸಿ ನಂದಿಕೂರು ಜನಜಾಗೃತಿ ಸಮಿತಿಯು ಸುಪ್ರೀಂ ಕೋರ್ಟ್‌ನ ಅಧೀನದ ಕೇಂದ್ರ ಹಸಿರು ಪೀಠಕ್ಕೆ ದೂರು ನೀಡಿತ್ತು.

ನ್ಯಾಯಮೂರ್ತಿ ಎ.ಎಸ್. ನಾಯ್ಡು ನೇತೃತ್ವದ ಡಾ.ಜಿ.ಕೆ. ಪಾಂಡೆ ಅವರ ನ್ನೊಳಗೊಂಡ ಪೀಠವು ಇದೇ 7ರಂದು ನಂದಿಕೂರು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಮನವಿಯನ್ನು ವಜಾ ಗೊಳಿ ಸಿತು. `ಯುಪಿಸಿಎಲ್ ಯೋಜನೆ ರಾಷ್ಟ್ರ ನಿರ್ಮಾಣದ ಕಾರ್ಯ, ದೇಶದ ವಿತ್ತೀಯ ಸಾಮರ್ಥ್ಯವನ್ನು ಹೆಚ್ಚಿಸಬ ಹುದಾದ ಯೋಜನೆಯಾಗಿದೆ~ ಎಂದಿ ರುವ ಪೀಠ, ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ  ಹಸಿರು ನಿಶಾನೆ ತೋರಿಸಿದೆ.

`ಉಡುಪಿ ಪವರ್ ಕಾರ್ಪೊರೇಶನ್‌ನಿಂದ ರಾಜ್ಯ ಕೇಂದ್ರ ಗ್ರಿಡ್‌ಗಾಗಿ ವಿದ್ಯುತ್ ಪೂರೈಕೆ ಮಾರ್ಗ ನಿರ್ಮಿಸಿ ಕೊಳ್ಳಲು ಟವರ್ ಸಂಖ್ಯೆ ಎ.ಪಿ100 ರಿಂದ ಎ.ಪಿ107 ವರೆಗಿನ ಸುಮಾರು 8.3 ಕಿ.ಮೀ ಉದ್ದದ ರಕ್ಷಿತಾರಣ್ಯದಲ್ಲಿ ಯಾವುದೇ ಮರ ಗಳನ್ನು ಕಡಿಯ ಬಾರದು. ಈಗಾಗಲೇ ಪರವಾನಗಿ ದೊರೆತಿರುವ ಅರಣ್ಯ ಪ್ರದೇಶದಲ್ಲಿ ಸಾಧ್ಯವಾದಷ್ಟು ಕನಿಷ್ಠ  ಸಂಖ್ಯೆಯಲ್ಲಿ ಮರಗಳನ್ನು ಕಡಿಯಬೇಕು. ಆದಷ್ಟು ಗೆಲ್ಲುಗಳನ್ನು ಮಾತ್ರ ಸವರಬೇಕು~ ಎಂದು ಪೀಠ ಆದೇಶ ನೀಡಿದ್ದು ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಇದ್ದ ಅಡ್ಡಿ ನಿವಾರಣೆ ಆದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.